ಮಾಯಕೊಂಡ: ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳಿಗೆ ಅಂತರ್ಜಲದ ಮೂಲವಾಗಿರುವ ಆನಗೋಡು ಹೋಬಳಿಯನರಗನಹಳ್ಳಿ ಕೆರೆಯು ಮಳೆ ಮತ್ತು ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ಶೇ.80 ರಷ್ಟು ಭರ್ತಿಯಾಗಿದ್ದು ಕೃಷಿಕರಿಗೆ ಸಂತಸ ತಂದಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ನೂರಾರು ಗ್ರಾಮಗಳು ಸಂಪೂರ್ಣ ಮಳೆಯಾಶ್ರಿತ ಭೂಪ್ರದೇಶ ವಾಗಿದ್ದು, ಬೋರ್‌ವೆಲ್ ನೀರನ್ನು ನಂಬಿಕೊಂಡು ರೈತರು ಅಡಕೆ, ಬಾಳೆ, ದಾಳಿಂಬೆ, ಪಪ್ಪಾಯ ಸೇರಿ ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
22 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ಒಳಪಟ್ಟಿದ್ದ ನರಗನಹಳ್ಳಿ ಕೆರೆಗೆ, ಯೋಜನೆ ವಿಫಲತೆಯಿಂದ ನಿರೀಕ್ಷಿಸಿದಷ್ಟು ನೀರು ತುಂಬಲಿಲ್ಲ. ನಂತರ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ಪುನಃ ಕೆರೆ ಸೇರ್ಪಡೆಗೊಂಡ ಪರಿಣಾಮ ಹಾಗೂ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೆರೆ ತುಂಬಿ ರಾರಾಜಿಸುತ್ತಿದೆ. 150 ಎಕರೆ ವಿಸ್ತೀರ್ಣದ ಈ ಕೆರೆ 850 ರಿಂದ 900 ಎಕರೆ ಪ್ರದೇಶಕ್ಕೆ ನೀರುಣಿಸುವ ಅಚ್ಚುಕಟ್ಟು ಹೊಂದಿದೆ.
ಕೆರೆಯಿಂದ ನೀರು ಹೊರ ಬಿಡದೆ ಅಂತರ್ಜಲ ಅಭಿವೃದಿಟಛಿಗೆ ನೀರನ್ನು ಶೇಖರಿಸಿಡಲಾಗುತ್ತಿದೆ. ಕಳೆದ ವರ್ಷ ಗ್ರಾಮ ಪಂಚಾಯಿತಿ ನರೇಗಾ
ಯೋಜನೆಯಲ್ಲಿ ಕೆರೆಯ ಹೂಳನ್ನು ತೆಗೆಯಲಾಗಿದ್ದು, ಇನ್ನೂ ಶೇ.70 ರಷ್ಟು ಹೂಳು ಹಾಗೇ ಇದೆ. ಪ್ರಸಕ್ತ ಕೆರೆ ಭರ್ತಿಯಾಗಿದ್ದು ಮುಂದಿನ ನಗಳಲ್ಲಿ ಹೂಳೆತ್ತುವ ಕಾರ್ಯ ಸಂಪೂರ್ಣವಾಗಿ ನಡೆಯಬೇಕು ಎಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕೆರೆ ಏರಿ ಮೇಲೆ ಜಾಲಿ ಮತ್ತು ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಗ್ರಾಪಂ ಮತ್ತು ಸಣ್ಣ ನೀರಾವರಿ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಕೂಡಲೇ ತೆರವುಗೊಳಿಸಬೇಕು. ಇದರಿಂದ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೊಳವೆಬಾವಿಗಳಿಗೆ ಜಲಮೂಲ
ನರಗನಹಳ್ಳಿ ಕೆರೆ ತುಂಬಿದರೆ ಸಮೀಪದ ಗಂಗನಕಟ್ಟೆ, ಚಿನ್ನಸಮುದ್ರ, ಕೊಡನೂರು, ಅಣ್ಣಾಪುರ, ಪರಶುರಾಂಪುರ, ಓಬೇನಹಳ್ಳಿ, ಗುಡ್ಡದಹಟ್ಟಿ ಸೇರಿ ಇತರ ಗ್ರಾಮಗಳ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ನೀರು ನಿರಂತರವಾಗಿ ಕೆರೆಗೆ ಬರಲು ವಿದ್ಯುತ್ ಅವಶ್ಯಕವಾಗಿದ್ದು, ಬೆಸ್ಕಾಂನವರು ವಿದ್ಯುತ್ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ರೈತರು.
ಕೆಲ ವರ್ಷಗಳಿಂದ ದಾವಣಗೆರೆ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಟ್ಟು 12 ಕೆರೆಗಳು ಸೇರಿವೆ. ಅದರಲ್ಲಿ ನರಗನಹಳ್ಳಿ ಕೆರೆಯು ಸೇರಿದ್ದು ಅವುಗಳ ಸಮಗ್ರ ಅಭಿವೃದಿಟಛಿಗೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಕೂಡಲೇ ಅಭಿವೃದಿಟಛಿಗೆ ಕ್ರಮ ಕೈಗೊಳ್ಳಲಾಗುವುದು. ಬಿ.ಕೆ. ಪ್ರವೀಣಕುಮಾರ್, ಎಇಇ, ಸಣ್ಣ ನೀರಾವರಿ ಇಲಾಖೆ, ದಾವಣಗೆರೆ ಏರಿ ಮೇಲೆ ಜಂಗಲ್ ಬೆಳೆದು ನಿಂತಿವೆ. ಕೆರೆಗೆ ಹೂಳು ತುಂಬಿದೆ. ಸಣ್ಣ ನೀರಾವರಿ, ಕಂದಾಯ ಹಾಗೂ ಸರ್ವೇ ಇಲಾಖೆ ಜಂಟಿ ಸರ್ವೇ ಮಾಡಿ ಕೆರೆಯ ಸಂಪೂರ್ಣ ಪ್ರದೇಶವನ್ನು ಹದ್ದುಬಸ್ತ್ ಮಾಡಬೇಕು ಹಾಗೂ ಕೆರೆ ಅಭಿವೃದಿಟಛಿಗೆ ಸರ್ಕಾರ ಮುಂದಾಗಬೇಕು. ಎನ್.ಆರ್. ಕೃಷ್ಣರಾಜ್ ಪ್ರಗತಿಪರ ಕೃಷಿಕ, ನರಗನಹಳ್ಳಿ