ಬೆಂಗಳೂರು: ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಅರ್ಭಟಿಸುತ್ತಿದ್ದ ಮಳೆ ತಗ್ಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಅ ಸಂದರ್ಭದಲ್ಲಿ ಭಾರಿ ಮಳೆಯಾಗಿತ್ತು. ಅಲ್ಲದೆ, ಕರಾವಳಿಯಲ್ಲಿ ಭಾಗದಲ್ಲಂತೂ ಮಳೆ ಅಬ್ಬರಿಸಿ ಬೊಬ್ಬರಿದಿತ್ತು. ಇದರಿಂದ ಪ್ರವಾಹ ಸೃಷ್ಟಿಯಾಗಿತ್ತು. ಆದರೆ, ಇದೀಗ ಮಳೆ ಕಡಿಮೆಯಾಗಿದ್ದು, ನಾಳೆ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ ದಿನಗಳಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.