ಮಂಡ್ಯ: ಜಿಲ್ಲೆಯಲ್ಲಿ ನ.11ರಿಂದ 15ರವರೆಗೆ ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಗರಿಷ್ಟ 29 ರಿಂದ 30 ಹಾಗೂ ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಅಂತೆಯೇ ಪ್ರತಿ ಗಂಟೆಗೆ 3 ರಿಂದ 4 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದೆಂದು ಮಾಹಿತಿ ನೀಡಿದೆ.