ಜಿಲ್ಲೆ

ರಾಮನಗರ ಜಿಲ್ಲೆಯ ಹಲವೆಡೆ ಮಳೆ

ಗಂಗಾಧರ ಬಿ ವಿ

ರಾಮನಗರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೇಸಿಗೆ ಮೊದಲ ಮಳೆ ಸುರಿದಿದ್ದು, ಕೆಲವು ಕಡೆಗಳಲ್ಲಿ ಅವಾಂತರವನ್ನ ಸೃಷ್ಠಿ ಮಾಡಿ ಹೋಗಿದೆ.

ರಾಮನಗರ ತಾಲೂಕಿನ ಕೈಲಾಂಚ ಬಿಡದಿ ಭಾಗದಲ್ಲಿ ಶುಕ್ರವಾರ ಸಂಜೆ ಕೆಲ ಕಾಲ ಬಿರುಗಾಳಿ ಸಹಿತವಾಗಿ ಭಾರೀ ಮಳೆ ಬಿದ್ದಿದೆ. ಇದರಿಂದ ವಿಭೂತಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮಯ್ಯನದೊಡ್ಡಿ ಗ್ರಾಮದ ಶಿವರಾಜು ಎಂಬುವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಮನೆ ಮೇಲ್ಚಾವಣೆ ಸೀಟುಗಳು ಹಾರಿಹೋಗಿವೆ.

ಬನ್ನಿಕುಪ್ಪೆ, ಕೈಲಾಂಚ, ಹುಣಸನಹಳ್ಳಿ, ಹುಲಿಕೆರೆ ಗುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಸಂಜೆ ಮಳೆ ಸುರಿಯಿತು.ಇದರಿಂದ ಹಲವಾರು ಮರಗಳು ಧರೆಗೆ ಹುರುಳಿ, ವಿದ್ಯುತ್ ಕಂಬಗಳು ಸಹ ಸಹ ನೆಲ ಕಚ್ಚಿವೆ.

ಬಿಡದಿ ಪಟ್ಟಣದಲ್ಲಿ ಶುಕ್ರವಾರ ಬಿರುಗಾಳಿ ಸಹಿತ ಭಾರಿಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪಾದ ವಾತಾವರಣವನ್ನ ಸೃಷ್ಟಿ ಮಾಡಿದೆ‌. ಸಂಜೆ ಸುಮಾರು 4 ಗಂಟೆಯಲ್ಲಿ ಗುಡುಗು ಹಾಗೂ ಬಿರುಗಾಳಿ ಸಹಿತ ವರ್ಷಧಾರೆ ಸುರಿದಿದೆ.
ಬಿಟ್ಟು ಬಿಡದೆ ಕೆಲ ತಾಸು ಸುರಿದ ಮಳೆಯಿಂದ ಪಟ್ಟಣದ ಚರಂಡಿಗಳು ಹಾಗೂ ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದವು. ವರ್ಷದ ಮೊದಲ ಮಳೆಯ ಅನುಭವ ಬಿಡದಿ ಪಟ್ಟಣದ ಜನತೆಗೆ ಹರ್ಷ ಮೂಡಿಸಿದೆ.