ಜಿಲ್ಲೆ

ಮನೆಗೆ ಮರಬಿದ್ದು ಹಾನಿ

Dakshina Kannada

ಗುರುಪುರ: ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆ, ಗಾಳಿಗೆ ಕಳೆದ ರಾತ್ರಿ ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯ ಪಡುಶೆಡ್ಡೆ ಗ್ರಾಮದ ಹಾಲಾಡಿಗುಡ್ಡೆ ನಿವಾಸಿ ವೆಂಕಟೇಶ ಎಂಬುವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮೂಡುಶೆಡ್ಡೆ ಗ್ರಾಮದ ಶಾಲೆಪದವು ಎಂಬಲ್ಲಿ ಲಲಿತಾ ಅವರ ವಾಸ್ತವ್ಯದ ಮನೆ ಗೋಡೆ ಜರಿದು ಭಾರಿ ನಷ್ಟ ಉಂಟಾಗಿದೆ.

ಎರಡೂ ದುರ್ಘಟನೆ ಸಂದರ್ಭ ಮನೆಯೊಳಗಿದ್ದ ಮನೆ ಮಂದಿ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಭಾನುವಾರ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಭರವಸೆ ನೀಡಿದರು. ಶಾಸಕರೊಂದಿಗೆ ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಅನಿಲ್ ಕುಮಾರ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹರಿಪ್ರಸಾದ್ ಶೆಟ್ಟಿ, ಸದಸ್ಯರಾದ ಲೋಕೇಶ್, ಅಕ್ಷತಾ, ಹರೀಶ್ ಮೂಡುಶೆಡ್ಡೆ, ಶಿವಾನಂದ, ಸುಬ್ರಹ್ಮಣ್ಯ ಮತ್ತಿತರರು ಇದ್ದರು.