ಕಲಬುರಗಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಯ ನೋಟ. 
ಜಿಲ್ಲೆ

ಕಲಬುರಗಿಯಲ್ಲಿ ಮಳೆಯ ಸಿಂಚನ : ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬ, ಮಾವಿನ ಫಸಲು

ಬಾಬುರಾವ ಯಡ್ರಾಮಿ

ಕಲಬುರಗಿ: ನಗರ ಸೇರಿ ಜಿಲ್ಲೆಯ ಕೆಲವೆಡೆ ಗುರುವಾರ ಸಂಜೆ ಗುಡುಗು ಬಿರುಗಾಳಿ ಸಹಿತ ಸ್ವಲ್ಪ ಮಳೆಯಾಗಿದೆ. ಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬಗಳು ಮತ್ತು ಮಾವಿನ ಫಸಲು ನೆಲಕ್ಕುರುಳಿವೆ. ಈ ವರ್ಷದ ಮೊದಲ ಮಳೆ ಅವಘಡಗಳೊಂದಿಗೆ ಬಂದAತಾಗಿದೆ. ಸೂರ್ಯನಗರಿಯಲ್ಲಿ ಬೆಳಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ೬.೨೦ರ ಸುಮಾರಿಗೆ ಶುರುವಾದ ಮಳೆ ೧೫ ನಿಮಿಷ ಸುರಿದು ನಿಂತಿತು. ಮೇಳಕುಂದಾ(ಬಿ) ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವೆಡೆ ಮಾವಿನ ಮಿಡಿಗಳು ಕಡಿದು ಬಿದ್ದಿವೆ. ಬಾಳೆ ಗಿಡಗಳು ಸಹ ಉರುಳಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಆಳಂದ ತಾಲೂಕಿನಲ್ಲಿ ವರುಣಾರ್ಭಟ ಜೋರಾಗಿದ್ದರೆ, ಚಿಂಚೋಳಿ, ಚಿತ್ತಾಪುರದಲ್ಲಿ ೨೦ ನಿಮಿಷ, ಸೇಡಂನಲ್ಲಿ ಗುಡುಗು ಸಹಿತ ಮಳೆಯಾಗಿದೆ. ಶಹಾಬಾದ್, ಕಾಳಗಿ, ಕಮಲಾಪುರ, ಜೇವರ್ಗಿ ತಾಲೂಕಿನ ಕೆಲವೆಡೆ ಸ್ವಲ್ಪ ಮಳೆಯಾಗಿದೆ. ಎಲ್ಲೂ ಅನಾಹುತ ಸಂಭವಿಸಿಲ್ಲ.