ಜಿಲ್ಲೆ

ಕರಾವಳಿಯ ಗ್ರಾಮೀಣ ಭಾಗದಲ್ಲಿ ಮಳೆ

Mangaluru - Shravan Kumar Nala

ಮಂಗಳೂರು: ಕರಾವಳಿಯ ಗ್ರಾಮೀಣ ಭಾಗವಾದ ಸಂಪಾಜೆ, ಸುಳ್ಯ, ಕೊಕ್ಕಡ, ಬೆಳ್ತಂಗಡಿ, ಕಡಬ ಸೇರಿದಂತೆ ಹಲವಡೆ ಬುಧವಾರ ಮಳೆಯಾಗಿದೆ. ಬೆಳಗ್ಗೆ ಮೋಡಕವಿದ ವಾತಾವರಣ, ನಂತರ ಮಧ್ಯಾಹ್ನ ವರೆಗೆ ಪ್ರಖರ ಬಿಸಿಲು ಸಹಿತ ಒಣಹವೆ ಮುಂದುವರಿದಿದೆ. ಸಂಜೆ ವೇಳೆ ಹಲವಡೆ ಉತ್ತಮ ಮಳೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಬುಧವಾರ ಸರಾಸರಿ 33.4 ಡಿಗ್ರಿ ಗರಿಷ್ಠ, 25.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ರಾತ್ರಿ 23.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಪೂರ್ತಿ ಒಣ ಚಳಿ ಮುಂದುವರಿದಿತ್ತು. ಸಂಜೆ ಕೊಕ್ಕಡ ನೆಲ್ಯಾಡಿ ಭಾಗದಲ್ಲಿ ಇಂದು ಬೆಳಗ್ಗೆ 15 ನಿಮಿಷಗಳ ಕಾಲ ಸಾಧಾರಣ ಮಳೆ, ಸಂಜೆ ಕೊಕ್ಕಡ ನೆಲ್ಯಾಡಿ ಭಾಗದಲ್ಲಿ ಕಾರ್ಮೋಡ ಇತ್ತು. ಶಿಶಿಲ ಭಾಗದಲ್ಲಿ ಸಾಧಾರಣ ಮಳೆ ಸುರಿದಿತ್ತು. ರಾತ್ರಿ ಮಳೆ ಕಾಡು ಹಾಗೂ ಪಶ್ಚಿಮಘಟ್ಟದ ಹಲವಡೆ ಹೆಚ್ಚಿನ ಪ್ರಮಾಣದ ಮೋಡ ಕವಿದ ವಾತಾವರಣ ಕಂಡುಬಂದಿದೆ.

*ಗುಡುಗು ಸಹಿತ ಮಳೆಯ ಮುನ್ಸೂಚನೆ

ಗುರುವಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕರಾವಳಿಯ ಗಡಿ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಮೇ 21ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದೆ. ಮುಂಗಾರು ಅಂಡಮಾನ್ ಹಾಗೂ ಕೇರಳಕ್ಕೆ ಅವಧಿಗೆ ಮುನ್ನವೇ ಆಗಮಿಸುವ ವರದಿಗಳಿದ್ದರೂ, ಆರಂಭಿಕ ದುರ್ಬಲತೆ ಇದ್ದರೆ ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಗಬಹುದು ಎಂದು ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ