-ಎಚ್ಚೆತ್ತುಕೊಳ್ಳದ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಬೆಳಗಾವಿ: ಶನಿವಾರ ಸುರಿದ ಭಾರೀ ಮಳೆಗೆ ಬೆಳಗಾವಿ ನಗರ ತತ್ತರಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಬಹುತೇಕ ರಸ್ತೆಗಳಲ್ಲಿ ನೀರು ಪ್ರವಾಹದಂತೆ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಚರಂಡಿಗಳನ್ನು ಸ್ವಚ್ಛ ಗೊಳಿಸದಿರುವುದು ಮತ್ತು ಹೂಳೆತ್ತದಿರುವ ಪರಿಣಾಮ ಮಳೆ ನೀರು ಮನೆ, ಅಂಗಡಿ ಮುಗ್ಗಟ್ಟುಗಳ ಒಳಗೆ ನುಗ್ಗಿದೆ. ರಸ್ತೆಗಳ ಮೇಲೆ ನೀರು ನದಿಯ ಪ್ರವಾಹದಂತೆ ಹರಿಯುತ್ತಿದೆ. ಆದರೂ, ಪಾಲಿಕೆ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ ಎಂದು ವ್ಯಾಪಾರಿಗಳು ದೂರಿದರು.
ಬೆಳಗಾವಿ ಹಳೆ ಪಿಬಿ ರಸ್ತೆ, ಬಸವೇಶ್ವರದ ಬಳಿ ಪಾಲಿಕೆ ಕಾಂಪ್ಲೆಕ್ಸ್, ಗ್ಲೋಬಲ್ ಟಾಕೀಸ್ ಸೇರಿ ವಿವಿಧ ಭಾಗಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.