ಜಿಲ್ಲೆ

ಬೆಳಗಾವಿಯಲ್ಲಿ ಗುಡುಗು,‌ಮಿಂಚು ಸಹಿತ ಭಾರೀ ಮಳೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ:ಬರದ ದವಡೆಗೆ ಸಿಲುಕಿ ನಲುಗುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಗುಡುಗು, ಮಿಂಚು ಸಹಿದ ಭಾರೀ ಮಳೆಗೆ ಜನರಿಗೆ, ರೈತರಿಗೆ ಸಣ್ಣ ಸಮಾಧಾನ ಸಿಕ್ಕಿದೆ.
ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನ, ಜಾನುವಾರ ಹಾಗೂ ಪಕ್ಷಗಳಿಗೆ ಮಳೆ ಆಗಮನದಿಂದ ನೆಮ್ಮದಿ ಸಿಕ್ಕಿದೆ. ಸುಮಾರು 40ಡಿಗ್ರಿ ಆಸುಪಾಸು ಬಿಸಿಲಿನ ತಾಪಕ್ಕೆ ಬವಸಳಿದಿದ್ದ ಜನತೆ‌ಮಳೆ ಕಂಡು ಹರ್ಷಗೊಂಡರು.
ಬೆಳಗಾವಿ ಮಹಾನಗರದಲ್ಲಿ ಮಳೆಯ ಅರ್ಭಟಕ್ಕೆ ಚರಂಡಿಗಳು ಬ್ಲಾಕ್ ಆಗಿ ರಸ್ತೆಯ ಮೇಲೆ ನೀರು ಹರಿಯಿತು. ಕೆಲ ವಸತಿ ಪ್ರದೇಶದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.