ಹರಪನಹಳ್ಳಿ: ಸಕಾಲಕ್ಕೆ ಮಳೆಯಾಗದೆ, ರೈತರು ಬೆಳೆದ ಬೆಳೆಗೆ ಸರಿಯಾದ ನೀರು ಇಲ್ಲವಾಗಿದ್ದರಿಂದ ಮಳೆಗಾಗಿ ಬಾಗಳಿ ಗ್ರಾಮಸ್ಥರು ದೇವರಿಗೆ ಗುರುವಾರ ಮೊರೆಹೋದರು.
ಗ್ರಾಮದ ಕನಕೇಶ್ವರ ಕಲಾ ಸಂಘದ ಭಜನಾ ತಂಡದೊಂದಿಗೆ ಬೆಳಗ್ಗೆ ಗ್ರಾಮದಿಂದ ಮಡಿಯಿಂದ ಕಾಲ್ನಡಿಗೆಯಲ್ಲಿ ಕಣಿವಿಹಳ್ಳಿಯ ಜಾಜೀಕಲ್ಲು ಗುಡ್ಡದ ಮೇಲಿನ ಕಲ್ಲಮಲ್ಲಣ್ಣ(ವೀರಭದ್ರೇಶ್ವರ) ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ದೇಶ ವಿಭಜನೆ ವಿರೋಧಿಸಿದ್ದ ಪ್ರೊ.ಬಿ.ಶೇಕ್ ಆಲಿ ಹಯಾತ್ ಔರ್ ಕಿದಾಮತ್
ಈ ವೇಳೆ ಭಜನೆಗಳನ್ನು ಹಾಡುವ ಮೂಲಕ ಉತ್ತಮ ಮಳೆಯಾಗಿ, ಬೆಳೆಗಳು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು. ನಂತರ ಬಾಗಳಿ ಗ್ರಾಮದ ಕೆರೆ ದಡದ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಭಜನೆ ಮಾಡಲಾಯಿತು. ನಂತರ ಗ್ರಾಮ ದೇವತೆ, ಕಾಳಮ್ಮ, ಶ್ರೀ ವೀರಭದ್ರೇಶ್ವರ, ಕನಕೇಶ್ವರ, ಸಂಗಮೇಶ್ವರ, ಸೇರಿ ವಿವಿಧ ದೇವಸ್ಥಾನಗಳಿಗೆ ತೆರಳಿ ಮಳೆಗಾಗಿ ಪ್ರಾರ್ಥಿಸಿದರು.
ಕನಕೇಶ್ವರ ಸಂಘದ ಅಧ್ಯಕ್ಷ ವಿ.ಬಿ.ವೀರೇಶ್, ಬಣಕಾರ ಮಂಜುನಾಥ, ಎಚ್.ನಾಗರಾಜ, ಬಣಕಾರ ರೇವಣ್ಣ, ಎನ್.ಬಾಲಚಂದ್ರಪ್ಪ, ಬಿ.ಯುವರಾಜ, ಸಿ.ಎಂ.ಗುರುಬಸವರಾಜ, ಕೊಟ್ರೇಶ್, ಈರಣ್ಣ, ಅಶೋಕ, ಕಲ್ಲೇಶ, ಮಂಜುನಾಥ, ಕರಿಯಪ್ಪ ಇತರರಿದ್ದರು.