ಮೈಸೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಧಿಕ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕಬಿನಿ, ನಗು ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಇದರಿಂದ ಈ ಡ್ಯಾಂಗಳಿಗೆ ಒಳ ಹರಿವು ಏರಿಕೆಯಾಗಿದ್ದು, ಇದರ ಫಲವಾಗಿ ಅಧಿಕ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಡಲಾಗಿದೆ.
ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಉಂಟಾದರೆ, ತಕ್ಷಣವೇ ಸಂಪರ್ಕಿಸಲು ಅನುಕೂಲವಾಗಲು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ-0821-2423800, 1077, ತಾಲೂಕು ಕಚೇರಿಗಳಾದ ಮೈಸೂರು-0821-2414812, ನಂಜನಗೂಡು-08221-223108, ತಿ.ನರಸೀಪುರ-08227-260210, ಎಚ್.ಡಿ.ಕೋಟೆ-08228-255325, ಹುಣಸೂರು-08222-252959, ಪಿರಿಯಾಪಟ್ಟಣ-08223-274175, ಸರಗೂರು-08228-296100, ಕೆ.ಆರ್.ನಗರ-08223-262371, ಸಾಲಿಗ್ರಾಮ-08223-283833 ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.