ಧಾರವಾಡ: ಕೆಲ ದಿನಗಳಿಂದ ಮಳೆಗಾಗಿ ಪರಿತಪಿಸುತ್ತಿದ್ದ ಜಿಲ್ಲೆಯ ಜನತೆ ಗುರುವಾರ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು. ಮಳೆಯಾದಾಗಲೊಮ್ಮೆ ಎಂದಿನಂತೆ ಬಿಆರ್‌ಟಿಎಸ್‌ನ ಅವಾಂತರ ಮತ್ತೊಮ್ಮೆ ಗೋಚರಿಸಿತು.
ಇಲ್ಲಿನ ಎನ್‌ಟಿಟಿಎ್ ಬಳಿಯ ಗಣೇಶ ದೇವಸ್ಥಾನದ ಎದುರು ಮಳೆ ನೀರು ಸರಾಗವಾಗಿ ಹರಿದುಹೋಗದೆ ರಸ್ತೆ ತುಂಬ ಆವರಿಸಿತ್ತು. ಬಿಆರ್‌ಟಿಎಸ್ ಪಥಗಳು ಅಕ್ಷರಶಃ ಕೆರೆಯಂತಾಗಿದ್ದವು. ಮಳೆ ನೀರು ನಿಂತಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಇದೇರೀತಿ ಕೆಎಂಎಪ್ ಎದುರಿನ ಬಿಆರ್‌ಟಿಎಸ್ ಪಥಗಳಲ್ಲಿ ಮಳೆಯ ಅವಾಂತರ ಸೃಷ್ಟಿಯಾಗಿತ್ತು.
ಮಳೆಗಾಗಿ ಕಾದು ಕುಳಿತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಮುಂಗಾರು ಬೆಳೆಗಳಿಗೆ ಇನ್ನಷ್ಟು ಮಳೆಯಾಗಬೇಕು ಎಂದು ಆಶಿಸುತ್ತಿದ್ದಾರೆ.