ಜಿಲ್ಲೆ

ಪುತ್ತೂರು ದೇವಳ ಸಮೀಪ ಚರಂಡಿ ಕುಸಿತ

Mangaluru - Nishantha Narayana

ಪುತ್ತೂರು: ನಗರಸಭೆಯ ಅಮೃತ ನಗಾರೋತ್ಥಾನ ನಿಽ ೪ರ ಮೂಲಕ ಮಹಾಲಿಂಗೇಶ್ವರ ದೇವಸ್ಥಾನದ ರಥದ ಕೊಟ್ಟಿಗೆ ಹಿಂಭಾಗ ಮಳೆನೀರು ಹರಿವಿಗೆ ನಿರ್ಮಾಣವಾದ ಚರಂಡಿ ಮಳೆಗೆ ಒಂದು ಭಾಗದಲ್ಲಿ ಕುಸಿದು ಹೋಗಿದೆ.

ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಿಂದ ಪ್ರಾರಂಭವಾಗಿ ವೆಂಕಟ್ರಮಣ ದೇವಸ್ಥಾನದ ಸಮೀಪದವರೆಗೆ ೨೫ ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಫೆ.೨೬ರಂದು ಗುದ್ದಲಿ ಪೂಜೆ ನಡೆದಿತ್ತು. ಶನಿವಾರ ವೆಂಕಟ್ರಮಣ ದೇವಸ್ಥಾನದ ಸಮೀಪದ ಕಾಮಗಾರಿ ಕುಸಿತವಾಗಿದೆ. ರಥೋತ್ಸವ ಸಂದರ್ಭ ಭಕ್ತರು ಕಿಕ್ಕಿರಿದು ತುಂಬಿದ ಸಂದರ್ಭ ಕುಸಿತವಾಗಿದ್ದರೆ ಸಮಸ್ಯೆಯಾಗುವ ಸಾಧ್ಯತೆಯಿತ್ತು.