ಜಿಲ್ಲೆ

ತೆಂಗಿನಮರ ಬಿದ್ದು ಸಂಚಾರಕ್ಕೆ ಅಡ್ಡಿ

Mangaluru - Nishantha Narayana

ಪುತ್ತೂರು: ಗಾಳಿ ಮಳೆಗೆ ವಿವಿಧ ಕಡೆ ಹಾನಿ ಸಂಭವಿಸಿದೆ. ಮಾಣಿ ಮೈಸೂರು ಹೆದ್ದಾರಿಯ ನೇರಳಕಟ್ಟೆಯಲ್ಲಿ ತೆಂಗಿನ ಮರವೊಂದು ಬಿದ್ದು, ಕೆಲವು ಕಾಲ ಸಂಚಾರಕ್ಕೆ ಸಮಸ್ಯೆಯಾಗಿದೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬಪ್ಪಳಿಗೆ ಸಮೀಪದ ಗುಂಪಕಲ್ಲಿನಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು, ಛಾವಣಿಗೆ ಹಾನಿಯಾಗಿದೆ. ಮನೆ ಮಂದಿ ಮನೆ ಹೊರಗೆ ಕೆಲಸ ಮಾಡುತ್ತಿದ್ದುದರಿಂದ ಹಾನಿ ತಪ್ಪಿದೆ.