ಜಿಲ್ಲೆ

ಮಳೆಗೆ ಕುಸಿದು ಬಿದ್ದ ಮನೆ

Raichur

ರಾಯಚೂರು

ನಿನ್ನೆ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಈ ಘಟನೆ ಜರುಗಿದೆ.

ಮಸ್ಕಿ ಪಟ್ಟಣದ 7ನೇ ವಾರ್ಡ್ ನಿವಾಸಿ ಸರಸ್ವತಮ್ಮ ಅವರ ಮನೆ ಕುಸಿದಿದ್ದು, ಸರಸ್ವತಮ್ಮ ಸೇರಿದಂತೆ ಕುಟುಂಬದ ಆರು ಸದಸ್ಯರು ಮನೆಯಲ್ಲಿ ಮಲಗಿದ್ದಾಗ ಘಟನೆ ಜರುಗಿದೆ.

ಅದೃಷ್ಟವಶಾತ್ ಮನೆ ಮಂದಿಗೆ ಎಚ್ಚರವಾಗಿ ಹೊರಬಂದ ಕಾರಣ ಅನಾಹುತ ತಪ್ಪಿದೆ.