ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ರಭಸ ಗಾಳಿ, ಆಲಿಕಲ್ಲು ಮಳೆಯಿಂದ ಅಲ್ಲಲ್ಲಿ ಹಾನಿಯಾದ ವರದಿಯಾಗಿದೆ.
ಗಾಳಿಯಿಂದ ಹೊಯ್ಸಳನಗರದ ಆಂಜನೇಯ ದೇವಸ್ಥಾನ ಮೇಲೆ ಮರ ಉರುಳಿಬಿದ್ದಿದೆ. ಅದರಿಂದ ದೇವಸ್ಥಾನಕ್ಕೆ ಧಕ್ಕೆಯಾಗಿದ್ದು, ದೇವಾಸ್ಥಾನದ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋ ಜಖಂಗೊ0ಡಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಮತ್ತೊಂದೆಡೆ ಜಿಲ್ಲಾ ಆಸ್ಪತ್ರೆ ಬಳಿ ಬೃಹತ್ ಮರ ರಸ್ತೆಗೆ ಉರುಳಿಬಿದ್ದಿದೆ.
ಇನ್ನು ಮಳೆಯಾದಾಗೊಮ್ಮೆ ಅವಾಂತರ ಸೃಷ್ಟಿಸುವ ಟೋಲ್ ನಾಕಾ ಪ್ರದೇಶದಲ್ಲಿ ಮತ್ತೆ ಸಮಸ್ಯೆ ಮರುಕಳಿಸಿತ್ತು. ಚರಂಡಿ ನೀರು ರಸ್ತೆ ಮೇಲೆ ನಿಂತಿದ್ದರಿ0ದ ವಾಹನ ಸವಾರರು ಪರದಾಡಿದರು. ಚರಂಡಿಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ರಸ್ತೆ ಮೇಲೆ ನಿಂತಿತ್ತು. ನೀರು ಸಂಗ್ರಹವಾಗಿದ್ದರಿ0ದ ವಾಹನ ಸವಾರರು ಕೆಲಕಾಲ ಪರದಾಡಬೇಕಾಯಿತು.