ಕಮಲ ಶಿವಪ್ಪ ನಾಯ್ಕ ಮನೆಯ ಮೇಲೆ ಮರ ಬಿದ್ದು ಒಂದು ಪಾರ್ಶ್ವಕ್ಕೆ ತೀವ್ರ ಹಾನಿಯಾಗಿದೆ.  
ಜಿಲ್ಲೆ

ಭಾರಿ ಮಳೆಗೆ ವ್ಯಾಪಕ ಹಾನಿ : ಮನೆ ಮೇಲೆ ಬಿದ್ದ ಮರ ದರೆ ಕುಸಿದು ಅಪಾಯಕಾರಿ ಸ್ಥಿತಿ

ಸೌಮ್ಯ ಆರ್

ಬಂಟ್ವಾಳ: ಬುಧವಾರ ಬೆಳಗ್ಗಿನ ವೇಳೆ ಸುರಿದ ಭಾರಿ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವೆಡೆ ಹಾನಿ ಸಂಭವಿಸಿದೆ. ಬಾಳ್ತಿಲ ಗ್ರಾಮದ ಬೋರಿಮಾರ್ ಕಮಲ ಶಿವಪ್ಪ ನಾಯ್ಕ ಎಂಬುವರ ಮನೆಯ ಮೇಲೆ ಮರ ಬಿದ್ದು ಒಂದು ಪಾರ್ಶ್ವಕ್ಕೆ ತೀವ್ರ ಹಾನಿಯಾಗಿದೆ. ಮೇಗಿನ ಕುರಿಯಾಳ ಎಂಬಲ್ಲಿ ಜಗದೀಶ್ ರೈ ಎಂಬುವರ ಮನೆಯ ಹಿಂಭಾಗದ ದರೆ ಕುಸಿದಿದೆ. ಕುರಿಯಾಳ ಗ್ರಾಮದ ಮಾರ್ಸೆಲ್ ಬೆನಡಿಕ್ಟ್ ಲೋಬೋ ಅವರ ಮನೆಯ ಹೆಂಚಿನ ಛಾವಣಿಗೆ ಹಾನಿಯಾಗಿದೆ. ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಕೇಂದ್ರ ಮೈದಾನದ ಬಳಿ ಮೋಹಿನಿ ಕಮಲಾಕ್ಷ ಗೌಡ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಇರ್ವತ್ತೂರು ಗ್ರಾಮದ ಸುಮಿತ್ರ ಎಂಬುವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.