ಜಿಲ್ಲೆ

ಕೃಷಿಕರಿಗೆ ಮಳೆ ಸವಾಲು!: ಅಡಕೆ ಬೆಳೆಗಾರರು ಕಂಗಾಲು ಭತ್ತ ಕಟಾವಿಗೂ ಅಡ್ಡಿ

ಮನೋಹರ್ ಬಳಂಜ ಬೆಳ್ತಂಗಡಿ

ಕಳೆದ ಕೆಲವು ದಿನಗಳಿಂದ ಮಧ್ಯಾಹ್ನದ ಬಳಿಕ ಸುರಿಯುತ್ತಿರುವ ಭಾರಿ ಮಳೆ ಕೃಷಿಕರಿಗೆ ತೊಂದರೆಯಾಗಿ ಪರಿಣಮಿಸಿದೆ.

ಮಧ್ಯಾಹ್ನವಾಗುತ್ತಿದ್ದಂತೆ ಗುಡುಗು- ಸಿಡಿಲಿನೊಂದಿಗೆ ಆರಂಭವಾಗುವ ಮಳೆ ರಾತ್ರಿವರೆಗೂ ನಿರಂತರ ಮುಂದುವರಿಯುತ್ತಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಈ ಸಮಯ ಆಗಾಗ ತುಂತುರು ಮಳೆಯೂ ಸುರಿಯುತ್ತದೆ. ಮಧ್ಯಾಹ್ನವಾಗುತ್ತಿದ್ದಂತೆ ಮಳೆ ಹೆಚ್ಚು ತೀವ್ರವಾಗುತ್ತಿದೆ.

ಕೊಳೆರೋಗದಿಂದ ತತ್ತರಿಸಿರುವ ಅಡಕೆ ತೋಟಗಳಲ್ಲಿ ಅಳಿದುಳಿದ ಹಣ್ಣಡಕೆ ಬೀಳತೊಡಗಿವೆ. ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ತೋಟಗಳ ಅಡಕೆ ಮಳೆ ನೀರಿನೊಂದಿಗೆ ಹಳ್ಳ, ನದಿಗಳಿಗೆ ಕೊಚ್ಚಿ ಹೋಗುತ್ತಿವೆ. ಹಣ್ಣಡಕೆಯನ್ನು ಒಣಗಿಸಲು ಮಳೆ ಅಡ್ಡಿಪಡಿಸಿದೆ. ಸದ್ಯದ ಸ್ಥಿತಿಯಲ್ಲಿ ಅಂಗಳದಲ್ಲಿ ಅಡಕೆ ಹಾಕಲು ಸಾಧ್ಯವಿಲ್ಲ. ಸೋಲಾರ್ ಗೂಡುಗಳಲ್ಲಿ ಕೊಳೆರೋಗದ ಅಡಕೆಯೇ ಹೆಚ್ಚಿದೆ. ಸೋಲಾರ್ ಗೂಡುಗಳಲ್ಲಿ ಹಣ್ಣಡಕೆಯನ್ನು ದಪ್ಪವಾಗಿ ಹಾಕಿದರೆ ಅದು ಸರಿಯಾಗಿ ಒಣಗುವುದಿಲ್ಲ. ಇದರಿಂದ ಅಡಕೆ ಗುಣಮಟ್ಟ ಹಾಳಾಗುತ್ತದೆ. ಗುಣಮಟ್ಟ ಹಾಳಾದ ಅಡಕೆಗೆ ಉತ್ತಮ ಬೆಲೆ ಅಥವಾ ಬೇಡಿಕೆ ಇರುವುದಿಲ್ಲ.

ತೋಟಗಳಲ್ಲಿ ಹೊಸ ಗಿಡ ನೆಡಲು, ಬುಡ ಬಿಡಿಸಿ ಗೊಬ್ಬರ ಹಾಕಲು ಮಳೆ ಬಿಡುತ್ತಿಲ್ಲ. ಅಡಕೆ ಗಿಡಗಳನ್ನು ನೆಟ್ಟ ಬಳಿಕ ಹೊಂಡಗಳಲ್ಲಿ ನೀರು ತುಂಬುತ್ತಿದ್ದು, ಅವು ಸಾಯುವ ಸಾಧ್ಯತೆ ಇದೆ. ಬುಡಗಳಿಗೆ ಹಾಕಿರುವ ಗೊಬ್ಬರ ನೀರು ಪಾಲಾಗುತ್ತಿದೆ. ತೋಟಗಳಲ್ಲಿ ತುಂಬಿರುವ ಕಳೆಯ ಸ್ವಚ್ಛತೆಗೂ ಮಳೆ ಬಿಡುತ್ತಿಲ್ಲ.

ರಬ್ಬರ್ ಟ್ಯಾಪಿಂಗ್ ಸಂಕಷ್ಟ

ಬೆಲೆ ಕಳೆದುಕೊಂಡಿರುವ ರಬ್ಬರ್ ಕೃಷಿಯಲ್ಲಿ ಕೃಷಿಕರಿಗೆ ಹೆಚ್ಚಿನ ಉತ್ಸಾಹ ಇಲ್ಲದಿದ್ದರೂ ವಾಡಿರುವ ಕೃಷಿ ಹಾಳಾಗಬಾರದು ಎಂಬ ಉದ್ದೇಶದಿಂದ ಟ್ಯಾಪಿಂಗ್‌ಗೆ ಮುಂದಾಗುತ್ತಿರುವ ರೈತರಿಗೂ ಮಳೆ ಅಡ್ಡಗಾಲು ಹಾಕಿದೆ. ಟ್ಯಾಪಿಂಗ್ ಪೂರ್ವ ತಯಾರಿ ಅಥವಾ ಟ್ಯಾಪಿಂಗ್ ನಡೆಸಲು ಮಳೆಯಿಂದ ಸಾಧ್ಯವಾಗುತ್ತಿಲ್ಲ.

ಗದ್ದೆಗಳಲ್ಲಿ ಅಡ್ಡಬಿದ್ದಿವೆ ಪೈರು

ಎಣೇಲು ಭತ್ತದ ಗದ್ದೆಗಳಲ್ಲಿ ಪೈರು ಬೆಳೆದು ನಿಂತಿದ್ದು, ಕಟಾವಿಗೆ ಮಳೆ ಬಿಡಬೇಕಾಗಿದೆ. ಬೆಳೆದು ನಿಂತಿರುವ ಪೈರು ಮಳೆಯಿಂದ ಗದ್ದೆಗಳಲ್ಲಿ ಅಡ್ಡಬಿದ್ದು ಫಸಲು ನಷ್ಟ ಉಂಟಾಗುತ್ತಿದೆ. ಸದ್ಯ ಕಟಾವು ವಾಡಿದರೂ ಭತ್ತವನ್ನು ಒಣಗಿಸುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಯಂತ್ರಗಳ ಮೂಲಕ ಭಕ್ತದ ಕಟಾವು ವಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಗದ್ದೆಗಳಿಗೆ ಕೊಂಡೊಯ್ಯಲಾರದ ಸ್ಥಿತಿ ನಿರ್ವಾಣವಾಗಿದೆ. ಕಟಾವು ವಾಡಿದರೂ ಬೈ ಹುಲ್ಲು ಕಾಪಾಡುವುದು ಬಹುದೊಡ್ಡ ಸಮಸ್ಯೆಯಾಗಿದೆ. ಬೆಳೆದು ನಿಂತ ಭತ್ತದ ಕಟಾವು ಹೆಚ್ಚು ದಿನಗಳ ಕಾಲ ಮುಂದೂಡಲು ಸಾಧ್ಯವಿಲ್ಲ. ಆದರೆ ಎಡೆಬಿಡದ ಮಳೆ ಪೈರು ಕಟಾವಿಗೆ ಅಡ್ಡಿಯಾಗಿದೆ.

ಇತರ ಸಮಸ್ಯೆಗಳು

ಈ ಬಾರಿಯ ದೀಪಾವಳಿ ಆಚರಣೆಗೂ ಮಳೆ ಬಹಳಷ್ಟು ತೊಂದರೆ ನೀಡಿತ್ತು. ಮಳೆ ಬಂದೊಡನೆ ಕೈ ಕೊಡುವ ವಿದ್ಯುತ್ ಗ್ರಾಹಕರನ್ನು ಹೈರಾಣರಾಗಿಸುತ್ತಿದೆ. ಈಗಾಗಲೇ ಹಲವು ತೋಟಗಳಿಗೆ ಸಿಡಿಲು ಬಡಿದಿದ್ದು, ನಷ್ಟದ ಪರಿಣಾಮ ಇನ್ನಷ್ಟೇ ತಿಳಿದು ಬರಬೇಕಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಭಾರಿ ಪ್ರವಾಣದ ಮಳೆ ನೀರು ಹರಿದು ಹೋಗುವುದರಿಂದ, ರಸ್ತೆಗಳು ಮತ್ತಷ್ಟು ಹಾಳಾಗುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಹೆಚ್ಚಿನ ಗ್ರಾಮೀಣ ಕಚ್ಚಾ ರಸ್ತೆಗಳು ಅಧೋಗತಿಗೆ ತಲುಪಿವೆ. ಮದುವೆ ಮೊದಲಾದ ಶುಭ ಕಾರ್ಯಗಳು, ದೀಪೋತ್ಸವಗಳು ಮುಂದಿನ ದಿನಗಳಲ್ಲಿ ನಡೆಯಲಿದ್ದು, ಇವುಗಳ ಪೂರ್ವ ತಯಾರಿಗೂ ಮಳೆಯಿಂದ ಸಮಸ್ಯೆ ಉಂಟಾಗಿದೆ.

ಮಳೆ ಇದೇ ರೀತಿ ಇನ್ನಷ್ಟು ದಿನ ಮುಂದುವರಿದರೆ ಅಡಕೆ ಒಣಗಿಸುವುದು ಸವಾಲಾಗಿ ಪರಿಣಮಿಸಲಿದೆ. ಹಣ್ಣಡಕೆ ಬೀಳತೊಡಗಿದ್ದು, ಸದ್ಯ ಕೊಯ್ಲು ವಾಡಲು ಮಳೆಯಿಂದ ಸಾಧ್ಯವಾಗುತ್ತಿಲ್ಲ. ಹವಾವಾನ ವೈಪರೀತ್ಯದಿಂದ ಕೃಷಿಯನ್ನು ರಕ್ಷಿಸುವುದೇ ಸವಾಲಾಗಿದೆ. ವಿ.ಜಿ.ಪಟವರ್ಧನ್ ಮುಂಡಾಜೆ ಪ್ರಗತಿಪರ ಕೃಷಿಕ ಎಣೇಲು ಭತ್ತದ ಗದ್ದೆಗಳಲ್ಲಿ ಪೈರು ಬೆಳೆದು ನಿಂತಿದ್ದು, ಕಟಾವಿಗೆ ಮಳೆ ಬಿಡುತ್ತಿಲ್ಲ. ಈಗಾಗಲೇ ಪೈರು ಅಡ್ಡ ಬೀಳತೊಡಗಿವೆ. ಜತೆಗೆ ಬೆಳೆದಿರುವ ಭತ್ತವು ನೀರು ಪಾಲಾಗುವ ಸಾಧ್ಯತೆ ಇದೆ. ನವೀನ್ ಲಾಂತ್ಯರ್ ಬಳಂಜ ಪ್ರಗತಿಪರ ಕೃಷಿಕ