ಜಿಲ್ಲೆ

ಮಳೆಗೆ ಹೊನ್ನೆಬೈಲ್ ಸೇರಿ ಹಲವೆಡೆ ಹಾನಿ

ಉತ್ತರ ಕನ್ನಡ ಡೆಸ್ಕ್

ಅಂಕೋಲಾ: ತಾಲೂಕಿನಲ್ಲಿ ವಿವಿಧೆಡೆ ಬುಧವಾರ ರಾತ್ರಿ ಸುರಿದ ಬಾರಿ ಪ್ರಮಾಣದ ಮಳೆಯಿಂದಾಗಿ ಅನೇಕ ಗ್ರಾಮೀಣ ಪ್ರದೇಶದಗಳಲ್ಲಿ ಅನಾಹುತ ಉಂಟಾಗಿದ್ದು, ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.

ಹೊನ್ನೇಬೈಲ ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ಹರಿಯುವ ಹಳ್ಳ ಉಕ್ಕಿ ಹರಿದ ಪರಿಣಾಮ ಬಂಡುಗಳು, ಪಿಚಿಂಗ್ ಸಂಪೂರ್ಣ ಕೊರಕಲಾಗಿದೆ. ನೀರಿನ ವೇಗಕ್ಕೆ ಅನೇಕ ಕಡೆಗಳಲ್ಲಿ ಕಾಂಪೌಂಡ್ ಗೋಡೆಗಳು ಕುಸಿದು ಬಿದ್ದಿವೆ. ಇನ್ನು ಪಿಚ್ಚಿಂಗ್ ಕೊಚ್ಚಿಹೋದ ಪರಿಣಾಮ ಪರಿಣಾಮ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟು ಮಾಡಿದೆ.

ಹೊನ್ನೆಬೈಲ್​ನಲ್ಲಿ ಹಾದು ಹೋಗಿರುವ ಹಳ್ಳಕ್ಕೆ ಇಡೀ ಪೂರ್ತಿ ಶಾಶ್ವತ ತಡೆಗೋಡೆಗಳು ನಿರ್ವಿುಸುವವರೆಗೂ ಮಳೆಗಾಲ ಬಂತು ಎಂದರೆ ಎಲ್ಲಿ ತಡೆಗೋಡೆ ಕುಸಿದು ಬೀಳುತ್ತದೆ ಎನ್ನುವ ಆತಂಕ ಜನರಲ್ಲಿದೆ. ಅಧಿಕಾರಿಗಳು ಹಾಗೂ ಶಾಸಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿಯೂ ಸಮಸ್ಯೆ ಆಗಲಿದೆ. ಘಟನಾ ಸ್ಥಳಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.