ಜಿಲ್ಲೆ

ಮಳೆಗೆ ಹಲವೆಡೆ ಹಾನಿ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಹಾನಿ ಸಂಭವಿಸಿದೆ.

ದೊಡ್ಡಮನೆ ಮತ್ತು ಇನಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು, ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯವಾಗಿತ್ತು. ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಕಟ್ಟೆ ಸಮೀಪ ಬೈನೆಮರ 11ಕೆ.ವಿ. ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ನಿಂತು ಹೋಗಿತ್ತು. ಶನಿವಾರ ಸಂಜೆ ಹೊತ್ತಿಗೆ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ಸಂಪರ್ಕ ನೀಡಿದರು.

ಒಂದು ಶತಮಾನಗಳ ಇತಿಹಾಸವಿರುವ ಪಟ್ಟಣದಲ್ಲಿರುವ ಆನೆಕೆರೆ ಕೌಂಪೌಂಡ್ ಕುಸಿದಿದೆ. ಸೋಮವಾರಪೇಟೆ, ಶನಿವಾರಸಂತೆ ಮಾರ್ಗದ ಹೈವೆ ಪಕ್ಕದಲ್ಲೇ ಕೆ ಇದ್ದು, ಕಾಂಪೌಂಡ್ ಕುಸಿದಿರುವ ಕಾರಣ, ಆತಂಕದಲ್ಲೇ ವಾಹನ ಚಾಲಿಸುವಂತಾಗಿದೆ. ಪ್ರತಿದಿನ ನೂರಾರು ವಾಹನಗಳು ರಸ್ತೆ ಸಂಚರಿಸುತ್ತಿವೆ. ಸ್ವಲ್ಪ ಆಯತಪ್ಪಿದರೂ ಅನಾಹುತವಾಗುವ ಸಂಭವವಿದ್ದು, ಕೂಡಲೆ ಲೋಕೋಪಯೋಗಿ ಇಲಾಖೆ ರೇಲಿಂಗ್ಸ್ ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.