ಜಿಲ್ಲೆ

ಹಲಗೂರು ಸುತ್ತಮುತ್ತ ಮಳೆ

ಪ್ರಸಿನ್ ಕೆ.ಆರ್

ಹಲಗೂರು: ಹಲಗೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಗೆ ಶುಕ್ರವಾರ ಸಾಯಂಕಾಲ ಬಿರುಗಾಳಿ ಸಹಿತ ಮಳೆ ಸುರಿದು ಭೂಮಿಗೆ ತಂಪೆರೆದಿದೆ.

ಗಾಳಿಯ ರಭಸಕ್ಕೆ ಕೆಲವೆಡೆ ಮರಗಳು, ವಿದ್ಯುತ್ ಕಂಬ ನೆಲಕ್ಕುರುಳಿವೆ. ಪರಿಣಾಮ ದಳವಾಯಿ ಕೋಡಿಹಳ್ಳಿ, ಗುಂಡಾಪುರ, ನಂದಿಪುರ, ತೊರೆಕಡನಹಳ್ಳಿ, ಸಾಗ್ಯ, ಸರಗೂರು, ಕೊನ್ನಾಪುರ, ಲಿಂಗಪಟ್ಟಣ ಇತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

ಹಲಗೂರು ಎಇ ಗುರು ಸೂರ್ಯಕುಮಾರ್ ವಿದ್ಯುತ್ ಕಂಬ ನೆಲಕ್ಕುರುಳಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಳೆ ಹೊನ್ನಿಗ ಗ್ರಾ.ಪಂ. ಸದಸ್ಯ ಆನಂದ್ ಎಂಬುವವರ ವೀಳ್ಯದ ಎಲೆ ಫಸಲು ಮಳೆಗೆ ಹಾನಿಯಾಗಿದೆ.