ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಸತತ ಎರಡು ದಿನಗಳಿಂದ ಸುರಿದ ಮಳೆಗೆ ಶುಕ್ರವಾರ ಶಂಕರ ಅವರ ಮನೆ ಕುಸಿದಿರುವುದು. 
ಜಿಲ್ಲೆ

ಸತತ ಮಳೆಗೆ ಮನೆ ಹಾನಿ

ಕಿಕ್ಕೇರಿ: ಸತತವಾಗಿ ಎರಡು ದಿನಗಳಿಂದ ಬಿಡದೆ ಸುರಿದ ಮಳೆಯಿಂದ ಹೋಬಳಿಯ ಸಾಸಲು ಗ್ರಾಮದ ಶಿವಕುಮಾರ್ ಅವರ ಮನೆ ಗೋಡೆ ಕುಸಿದಿದೆ. ಬಡತನದಲ್ಲಿರುವ ರೈತ ಶಿವಕುಮಾರ್ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಮಳೆಯ ಆರ್ದ್ರತೆಗೆ ಮಣ್ಣಿನ ಗೋಡೆ ಶಿಥಿಲವಾಗಿ ಕುಸಿದಿದೆ. ಪರಿಣಾಮ ಮನೆಯ ಛಾವಣಿ, ಹೆಂಚುಗಳು ಹಾಳಾಗಿವೆ. ಮನೆಯಲ್ಲಿದ್ದ ಬಟ್ಟೆ, ಧವಸ ಧಾನ್ಯ, ಪೀಠೋಪಕರಣ ನಾಶವಾಗಿದೆ. ಗ್ರಾಮಲೆಕ್ಕಿಗ ಪ್ರಸನ್ನ ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಸೂಕ್ತ ಪರಿಹಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.