ಮಡಿಕೇರಿ:
ಜಿಲ್ಲೆಯಾದ್ಯಂತ ಗುರುವಾರ ಸಾಧಾರಣ ಮಳೆ ಮುಂದುವರಿದಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಗಾಗ್ಗೆ ಜೋರು ಮಳೆ, ಮಂಜು ಕವಿದ ವಾತಾವರಣ, ಮಧ್ಯೆ ಮಧ್ಯೆ ತುಂತುರು ಮಳೆ, ಚಳಿಯ ಅನುಭವ ಆಯಿತು. ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸರಾಸರಿ 22.69 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 42.70 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1877.04 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 1707.65 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 36.05 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 15.25 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 12.20 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 34.25 ಮಿ.ಮೀ., ಹಾಗೂ ಕುಶಾಲನಗರ ತಾಲೂಕಿನಲ್ಲಿ 15.70 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ 40, ನಾಪೋಕ್ಲು 12.20, ಸಂಪಾಜೆ 54, ಭಾಗಮಂಡಲ 38, ವಿರಾಜಪೇಟೆ 15, ಅಮ್ಮತ್ತಿ 15.50, ಹುದಿಕೇರಿ 11.40, ಶ್ರೀಮಂಗಲ 16.40, ಪೊನ್ನಂಪೇಟೆ 10, ಬಾಳೆಲೆ 11, ಸೋಮವಾರಪೇಟೆ 26, ಶನಿವಾರಸಂತೆ 23, ಶಾಂತಳ್ಳಿ 70, ಕೊಡ್ಲಿಪೇಟೆ 18, ಕುಶಾಲನಗರ 9.20 ಹಾಗೂ ಸುಂಟಿಕೊಪ್ಪ 22.20 ಮಿ.ಮೀ. ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಗುರುವಾರದ ಮಾಹಿತಿ ಪ್ರಕಾರ 2856.50 ಅಡಿ ನೀರಿದೆ. ನೀರಿನ ಒಳಹರಿವು 6343 ಕ್ಯೂಸೆಕ್ ಇದ್ದು, ನದಿಗೆ 5812 ಕ್ಯೂಸೆಕ್, ನಾಲೆಗೆ 350 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.