ಜಿಲ್ಲೆ

ಮಡಿಕೇರಿಗೆ ತಂಪೆರದ ಮಳೆರಾಯ

ಸುನಿಲ್ ಪೊನ್ನೇಟಿ

ಮಡಿಕೇರಿ:

ಬಿಸಿಲಿನಿಂದ ಬಸವಳಿದಿದೆ ಮಡಿಕೇರಿಗೆ ಮಳೆರಾಯ ಕೊನೆಗೂ ತಂಪೆರೆದಿದ್ದಾನೆ. ಸೋಮವಾರ ಸಂಜೆ 4.30ರ ಸುಮಾರಿಗೆ ಆರಂಭವಾದ ಮಳೆ 5.10ರ ತನಕ ಸುರಿಯಿತು. ಗುಡುಗು, ಮಿಂಚು, ಆಲಿಕಲ್ಲು ಸಹಿತ ಬಿದ್ದ ಮಳೆಯಿಂದಾಗಿ ನಗರದಲ್ಲಿ ಸ್ವಲ್ಪ ತಂಪಿನ ವಾತಾವರಣ ನಿರ್ಮಾಣ ಆಯಿತು. ಕಳೆದ 3-4 ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಬರುತ್ತಿದ್ದರೂ ಮಡಿಕೇರಿ ಕಡೆ ಸುಳಿದಿರಲಿಲ್ಲ. ಆದರೆ ಸೋಮವಾರ ಈ ಕೊರತೆ ನೀಗಿಸಲು ಎಂಬAತೆ ಉತ್ತಮವಾಗಿ ಮಳೆ ಬಂತು.

ಶಾಲಾಮಕ್ಕಳು ಮಳೆಯಲ್ಲಿ ನೆಬೆಯುತ್ತಲೇ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಜಿಲ್ಲೆಯ ಕೆಲವು ಕಡೆ ಮಳೆಯಾಗಿದ್ದು, ಬಹುತೇಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇತ್ತು.