ಜಿಲ್ಲೆ

ಮೆಮು ರೈಲು ಓಡಾಟಕ್ಕೆ ರೈಲ್ವೆ ಒಪ್ಪಿಗೆ

ತುಮಕೂರು ಡೆಸ್ಕ್

ಬೆಂಗಳೂರು-ತುಮಕೂರು ಸಂಚಾರ ಸುಲಭ | ಇಲಾಖೆಯ ರಾಜ್ಯ ಖಾತೆ ಸಚಿವ ಸೋಮಣ್ಣ ಮಾಹಿತಿ

ವಿಜಯವಾಣಿ ಸುದ್ದಿಜಾಲ ತುಮಕೂರು
ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರೆಗ್ಯುಲರ್​ ಪ್ಯಾಸೆಂಜರ್​ ಫ್ರೆಂಡ್ಲಿ ಮೆಮು ರೈಲು ಸರ್ವಿಸ್​ ಓಡಾಟಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ತುಮಕೂರು&ಬೆಂಗಳೂರು ಹಾಗೂ ಬೆಂಗಳೂರು& ತುಮಕೂರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್​ ರೈಲು ಓಡಾಡಿಸಲು ತುಮಕೂರು ಜನತೆಯ ಬಹಳ ದಿನಗಳ ಬೇಡಿಕೆ ಈಡೇರಿದೆ. ಸೆ.2ರಿಂದಲೇ ತುಮಕೂರು&-ಯಶವಂತಪುರ ಮಾರ್ಗವಾಗಿ ಮೆಮು ಟೆನ್​ ಓಡಾಟಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ ಎಂದು ಖಚಿತಪಡಿಸಿದ್ದಾರೆ.


ತುಮಕೂರು-&ಯಶವಂತಪುರ ಮೆಮು ಟ್ರೈನ್​ 06201(66561) ಬೆಳಗ್ಗೆ 8.55ಕ್ಕೆ ತುಮಕೂರಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಟ್ರೈನ್​ ಸಂಖ್ಯೆ 06202(66562) ಯಶವಂತಪುರದಿಂದ 5.40ಕ್ಕೆ ಹೊರಟು ಸಾಯಂಕಾಲ 7.05ಕ್ಕೆ ತುಮಕೂರು ತಲುಪಲಿದೆ. ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್​ ನಂಬರ್​ 06205(6565) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ. ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್​ ನಂಬರ್​ 06206(66566) ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ. ಮೆಮು ರೈಲು ಮಾರ್ಗಮಧ್ಯದಲ್ಲಿ ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್​ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಲದೇವನಹಳ್ಳಿ, ಚಿಕ್ಕಬಾಣಾವರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-&ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ. ಯಶವಂತಪುರ&- ಹೊಸೂರು ಮೆಮು ರೈಲು ಓಡಾಟಕ್ಕೂ ಸಹ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.

ಟ್ರೈನ್​ ಸಂಖ್ಯೆ 06203(66563) ಯಶವಂತಪುರ- ಹೊಸೂರು ಮಾರ್ಗವಾಗಿ ಮೆಮು ರೈಲು ಚಲಿಸಲಿದ್ದು ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ಅದೇ ರೀತಿ 06204(66564) ಹೊಸೂರು&ಯಶವಂತಪುರ ಮೆಮು ಸಾಯಂಕಾಲ 3.20ಕ್ಕೆ ಹೊಸೂರಿನಿಂದ ಹೊರಟು ಸಾಯಂಕಾಲ 5.15ಕ್ಕೆ ಯಶವಶವಂತಪುರ ತಲುಪಲಿದೆ. ಈ ರೈಲು ಮಾರ್ಗ ವಧ್ಯದಲ್ಲಿ ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿ, ಆನೆಕಲ್​ ರಸ್ತೆ, ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಎರಡು ಮಾರ್ಗಮಧ್ಯದಲ್ಲಿ ಮೆಮು ರೈಲುಗಳ ಓಡಾಟಕ್ಕೆ ಚಾಲನೆ ನೀಡುವುದಾಗಿ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.


ಟೆಂಡರ್​ ಪ್ರಕ್ರಿಯೆ ಆರಂಭ: ಶೆಟ್ಟಿಹಳ್ಳಿ ಗೇಟ್​ ಬಳಿ ಪಾದಚಾರಿ ಸಬ್​ ವೇ, ಭೀಮಸಂದ್ರದ ರೈಲ್ವೇ ಕೆಳ ಸೇತುವೆ (ಲಘು ವಾಹನಗಳ ಸಂಚಾರಕ್ಕಾಗಿ) ಕಾಮಗಾರಿಗಳಿಗೆ ಈಗಾಗಲೇ ಸಚಿವ ವಿ.ಸೋಮಣ್ಣ ಸೂಚನೆಯ ಮೇರೆಗೆ ಟೆಂಡರ್​ ಪ್ರಕ್ರಿಯೆ ಆರಂಭಿಸಲಾಗಿದ್ದು, ನಗರದ ನಾಗರಿಕರ ಪರವಾಗಿ ಧನ್ಯವಾದಗಳು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್​ ತಿಳಿಸಿದ್ದಾರೆ. ನಗರದಲ್ಲಿ ಶೆಟ್ಟಿಹಳ್ಳಿ ಗೇಟ್​ ಬಳಿ ಪಾದಚಾರಿ ಸಬ್​ ವೇ ಕಾಮಗಾರಿಗೆ ರೂ.2.48 ಕೋಟಿ ರೂ. ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ (ಲಘು ವಾಹನಗಳ ಸಂಚಾರಕ್ಕಾಗಿ) ನಿಮಾರ್ಣಕ್ಕೆ 1.87 ಕೋಟಿ ರೂ. ಕಾಮಗಾರಿ ಆ ಭಾಗದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕಳೆದ 10 ವರ್ಷಗಳಿಂದಲೂ ಭೀಮಸಂದ್ರ ಹಳೆಯ ಗ್ರಾಮದ ಜನರು ರಾಷ್ಟ್ರೀಯ ಹೆದ್ದಾರಿಗೆ ಬರಲು ಸಾಧ್ಯವಾಗದೆ ವನವಾಸ ಅನುಭವಿಸುತ್ತಿದ್ದರು ಇದನ್ನು ಸರಿಪಡಿಸುವಂತೆ ಹಿಂದಿನ ಸಂಸದರಾದ ಜಿ.ಎಸ್​.ಬಸವರಾಜು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತಂದಿದ್ದರು. ವಿ.ಸೋಮಣ್ಣ ಅವರು ಸಚಿವಾದ ಆರಂಭದಲ್ಲಿಯೇ ಕಾಮಗಾರಿಗೆ 1.87ಕೋಟಿ ರೂ. ಮಂಜೂರು ಮಾಡುವ ಮೂಲಕ ಈ ಭಾಗದ ಜನರ ನೆಮ್ಮದಿಗೆ ಕಾರಣರಾಗಿದ್ದಾರೆ.| ಜಿ.ಬಿ.ಜ್ಯೋತಿಗಣೇಶ್​ ಶಾಸಕ