ಜಿಲ್ಲೆ

ರೈಲ್ವೆ ನಿಲ್ದಾಣಕ್ಕೆ ಸೌಲಭ್ಯ ಕಲ್ಪಿಸಲು ಮನವಿ

ಕುಡಚಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬುಧವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಕುಂದು&ಕೊರತೆ ಆಲಿಸಿದರು. ಈ ಭಾಗದಲ್ಲಿ ಕುಡಚಿ ದೊಡ್ಡ ರೈಲು ನಿಲ್ದಾಣವಾಗಿದ್ದು, ಎಲ್ಲ ಎಕ್ಸಪ್ರೆಸ್​ ರೈಲುಗಳ ನಿಲುಗಡೆ ಮಾಡಬೇಕೆಂದು ಸ್ಥಳಿಯರು ಮನವಿ ಸಲ್ಲಿಸಿದರು.

ಕುಡಚಿ ರೈಲು ನಿಲ್ದಾಣದ ಪ್ಲಾಟ್​ ಾಮ್​ರ್ದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಮೇಲ್ಭಾಗದಲ್ಲಿ ಪತ್ರಾಸ್​ ಶೆಡ್​ ಇಲ್ಲ. ಕೂಡಲೆ ಎರಡು ಪ್ಲಾಟ್​ಾಮ್​ರ್ ಮೇಲ್ಭಾಗದಲ್ಲಿ ಪತ್ರಾಸ್​ ಶೆಡ್​ ನಿರ್ಮಿಸಬೇಕು. ಆಸನದ ವ್ಯವಸ್ಥೆ, ವಿಶ್ರಾಂತಿ ಕೋಣೆಗಳ ವ್ಯವಸ್ಥೆಯಾಗಬೇಕು. ಒಂದು ಲ್ಟ್​ಿ ನಿರ್ಮಿಸಿಕೊಡಬೇಕು.ಗುಂಡವಾಡ, ಶಿರಗೂರ ಗ್ರಾಮಗಳಿಗೆ ಹೋಗಿ ಬರುವ ಜನರಿಗೆ ಸೇತುವೆ ನಿರ್ಮಿಸಬೇಕು. ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ವಿಶೇಷ ಅನುದಾನ ಮಂಜೂರ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಪುರಸಭೆ ಅಧ್ಯ ಹಮಿದೋದ್ದೀನ್​ ರೋಹಿಲೆ, ಡಾ.ಬಿ.ಆರ್​.ಅಂಬೇಡ್ಕರ ಶಿಣ ಸಂಸ್ಥೆಯ ನಿರ್ದೇಶಕ ಅಮಿತ ಘಾಟಗೆ, ಅಲ್ಲಾವುದ್ದೀನ್​ ರೋಹಿಲೆ, ಜೈಕುಮಾರ ಸನದಿ, ಮುಶ್ಫಿಕ ಜಿನ್ನಾಬಡೆ, ಸಾಯಬಲಾಲ್​ ರೋಹಿಲೆ, ಗರಲೊ ಮಾರ್​ೂ, ಮೈನಸಾಯ ವಾಟೆ, ಮುಸ್ಸಾದಿಕ್​ ಖರೀಮಖಾನ್​, ಇಜಾಜ್​ ಬಿಚ್ಚು, ರೈಲ್ವೆ ಅಧಿಕಾರಿ ಭೀಮಪ್ಪ ಇತರರಿದ್ದರು.