ಹಿರೇಬಾಗೇವಾಡಿಲ್ಲಿ ಸಾಂಸತಿಕ ಭವನವನ್ನು ಸಂಸದ ಜಗದೀಶ ಶೆಟ್ಟರ್​ಉದ್ಘಾಟಿಸಿದರು. ಜಯಶ್ರೀ ಜಪ್ತಿ, ಸಂಜಯ ಪಾಟೀಲ, ಚೇತನ ಅಂಗಡಿ, ಸಿದ್ದಪ್ಪ ಹುಕ್ಕೇರಿ ಇತರರಿದ್ದರು. 
ಜಿಲ್ಲೆ

ಸದ್ಯದಲ್ಲೇ ರೈಲ್ವೆ ಮಾರ್ಗ ಕಾಮಗಾರಿ ಆರಂಭ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಹಿರೇಬಾಗೇವಾಡಿ: ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡಕ್ಕೆ ರೆಲು ಮಾರ್ಗ ಸರ್ವೇ ಕೆಲಸ ಮುಗಿದಿದ್ದು, ಶ್ರೀ ಕಾಮಗಾರಿ ಪ್ರಾರಂಭವಾಗಲಿದೆ. ಇದರಿಂದ ಈ ಭಾಗದ ವ್ಯಾಪಾರಸ್ಥರಿಗೆ ಮತ್ತು ರೆತರಿಗೆ ನೇರವಾಗಿ ಮಾರುಕಟ್ಟೆ ತಲುಪಿ ವ್ಯಾಪಾರ ವಹಿವಾಟು ಮಾಡಲು ಅನುಕೂಲವಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಸೋಮವಾರ ಇಲ್ಲಿಯ ಜಾಲಿಕರೆಮ್ಮ ದೇವಸ್ಥಾನದಲ್ಲಿ ಸಂಸದರ ಅನುದಾನದಡಿಯಲ್ಲಿ ನಿರ್ಮಾಣವಾದ ಸಾಂಸತಿಕ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಬಡೇಕೊಳ್ಳಮಠದ ನಾಗೇಂದ್ರ ಸ್ವಾಮಿಗಳು, ಮುತ್ನಾಳ ಕೇದಾರ ಶಾಖಾ ಪೀಠದ ಶಿವಾನಂದ ಶಿವಾಚಾರ್ಯರು, ಅರಳೀಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿ, ಜಾಲಿ ಕರೆಮ್ಮ ದೇವಸ್ಥಾನದ ಉಳವಪ್ಪಜ್ಜ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದೆ ಮಂಗಲ ಅಂಗಡಿ, ಗ್ರಾಪಂ ಅಧ್ಯೆ ಜಯಶ್ರೀ ಜಪ್ತಿ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಯುವ ಮುಖಂಡ ಚೇತನ ಅಂಗಡಿ, ಸಿದ್ದಪ್ಪ ಹುಕ್ಕೇರಿ, ರಾಯಪ್ಪ ಕರಗುಪ್ಪಿ, ಮಂಜುನಾಥ ಕುಂಬಾರ, ಆನಂದ ನಂದಿ, ಮಲ್ಲಿಕಾರ್ಜುನ ಟಿಗೆಣ್ಣವರ ಇತರರಿದ್ದರು.