ಜಿಲ್ಲೆ

ರೈಲ್ವೆ ಮಾರ್ಗಕ್ಕೆ ಒಗ್ಗಟ್ಟಿನ ಹೋರಾಟ ಅವಶ್ಯ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ಲೋಕಾಪುರ&ಧಾರವಾಡ ರೆಲ್ವೆ ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿ ಎಲ್ಲರೂ ಪಾತೀತ ಹಾಗೂ ಜಾತ್ಯತಿತವಾಗಿ ಹೋರಾಟ ನಡೆಸಬೇಕು ಎಂದು ರಾಮದುರ್ಗ ರೆಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡ ಎಂ.ಕೆ.ಯಾದವಾಡ ಹೇಳಿದರು.

ಪಟ್ಟಣದ ಆಡಳಿತ ಸೌಧದ ಹತ್ತಿರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಮದುರ್ಗ ರೆಲ್ವೆ ಮಾರ್ಗ ನಿರ್ಮಾಣ ಹೋರಾಟ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಶಾಸಕ, ಅಶೋಕ ಪಟ್ಟಣ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ್​ ಮತ್ತು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಈಗಾಗಲೇ ಮನವಿ ಕೊಟ್ಟಿದ್ದೇವೆ. ರೆಲ್ವೆ ಸಚಿವ ಅಶ್ವಿನಿ ವೆಷ್ಣವ ಅವರು 2017ರಲ್ಲಿ ಸಮೀೆ ಆಗಿದೆ ಮತ್ತೆ ಪರಿಶೀಲಿಸಿ ಎಂದು ರೆಲ್ವೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದರು.

ವಕೀಲ ಬಿ.ಯು. ಬೆರಕದಾರ ಅಧ್ಯತೆ ವಹಿಸಿ ಮಾತನಾಡಿ, ಮನುಷ್ಯನಿಗೆ ಅವಶ್ಯವಿರುವ ಮೂಲ ಸೌಲಭ್ಯದ ಬಗ್ಗೆ ಒಗ್ಗಟ್ಟಿನ ಹೋರಾಟ ಮಾಡಬೇಕು. ಇದು ನಮ್ಮ ಹಕ್ಕು, ಆ.11ರಂದು ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.

ಸಭೆಯಲ್ಲಿ ಎ.ಆರ್​.ಪಠಾಣ, ಡಿ.ಎ್​.ಹಾಜಿ, ಶಶಿಕಾಂತ ನೆಲ್ಲೂರ, ಶಿವಪ್ಪ ರಾಯಬಾಗ, ವಕೀಲ ರಾಜು, ನೂರ್​ ಅಕ್ಕೋಜಿ, ಕಾಶೀಮ್​ ಪಡದಾರ್​, ಶಿಶಿಕಾಂತ ನೆಲ್ಲೂರ, ಸಿ.ಎಸ್​.ಹಿರೇಮಠ, ವಿಗ್ನೇಶ ಹೆಬ್ಬಾರ್​, ಮಂಜುನಾಥ ಮಾದರ ಇತರರಿದ್ದರು.