ಜಿಲ್ಲೆ

ಮಿತ್ತೂರು ರೈಲ್ವೇ ಮೇಲ್ಸೇತುವೆ ರಕ್ಷಣಾ ದ್ವಾರಕ್ಕೆ ಲಾರಿ ಡಿಕ್ಕಿ

reportermng

ವಿಟ್ಲ: ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರು ರೈಲ್ವೇ ಮೇಲ್ಸೇತುವೆ ರಕ್ಷಣಾ ದ್ವಾರಕ್ಕೆ ಭಾನುವಾರ ಬೆಳಗಿನ ಜಾವ ಲಾರಿ ಡಿಕ್ಕಿಯಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಂಟೇನರ್ ಲಾರಿ ದಾರಿ ತಪ್ಪಿ ಪುತ್ತೂರಿನ ಕಡೆಗೆ ಸಂಚರಿಸಿದೆ. ಮಿತ್ತೂರಿನಲ್ಲಿ ಈ ಅಪಘಾತಕ್ಕೊಳಗಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ವಾಹನ ತೆರವು ಮಾಡಿದ್ದಾರೆ.