ಬೆಂಗಳೂರು: "ನಮ್ಮ ನಕ್ಷೆ' ಅಪ್ಲಿಕೇಶನ್ ಮೂಲಕ ರೈಲು ನಿಲ್ದಾಣಗಳ
ಡಿಜಿಟಲ್ ನ್ಯಾವಿಗೇಷನ್ ಅನ್ನು ಪರಿಚಯಿಸಲಾಗುವುದು. ಇದು ಪ್ರಯಾಣಿಕರಿಗೆ ಪ್ಲಾಟ್ಫಾಮ್ರ್ಗಳು, ಪ್ರವೇಶದ್ವಾರಗಳು, ಲಿಫ್ಟ್ಗಳು ಮತ್ತು ನಿರೀಕ್ಷಣಾ ಕೊಠಡಿಗಳನ್ನು ತಿಳಿಯಲು ಸುಲಭವಾದ ನಿಲ್ದಾಣ ನಕ್ಷೆಗಳನ್ನು ನೀಡಲಿದೆ ಎಂದು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ತಿಳಿಸಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಆರಂಭದಲ್ಲಿ ಬೆಂಗಳೂರು ಕೆಎಸ್ಆರ್ ನಿಲ್ದಾಣದ ಮಾಹಿತಿಯನ್ನು ಈ ಅಪ್ಲಿಕೇಷನ್ನಲ್ಲಿ ಅಳವಡಿಸಲಾಗುತ್ತಿದೆ. ಶೀಘ್ರದಲ್ಲೇ ಮತ್ತಿತರ ನಿಲ್ದಾಣಗಳನ್ನು ಸೇರಿಸಲಾಗುತ್ತದೆ ಎಂದರು.
ಬೆಂಗಳೂರು ವಿಭಾಗವು ತನ್ನ ಆದಾಯದ ಶೇ.73 ರಷ್ಟು ಪ್ರಯಾಣಿಕರ ಸಾಗಣೆಯಿಂದ ಗಳಿಸುತ್ತಿದ್ದು, 2024&-25ರ ಆರ್ಥಿಕ ವರ್ಷದಲ್ಲಿ ಬೆಂಗಳೂರು ವಿಭಾಗದ ಇತರ ಮಾಹಿತಿಗಳನ್ನು ನೀಡಿದರು.
ವಿವಿಧ ನಿಲ್ದಾಣಗಳಲ್ಲಿ ಎಸ್ಕಲೇಟರ್ಗಳನ್ನು ಒದಗಿಸುವುದು, ರೈಲುಗಳ ಸಂಚಾರ ಆವೃತ್ತಿಯನ್ನು
ಹೆಚ್ಚಿಸುವುದು, ಪ್ರಯಾಣಿಕರ ಸೌಲಭ್ಯಗಳ ಸುಧಾರಣೆ ಮತ್ತು ಇತರ ರೈಲ್ವೆ ಸಂಬಂಧಿತ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಮಾಥುರ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ, ಹಿರಿಯ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕಿ ಪ್ರಿಯಾ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತೆ ಶ್ರೇಯಾನ್ಸ್ ಬಿ.ಚಿಂಚವಾಡೆ, ಡಿಆರ್ಯುಸಿಸಿ ಸಮಿತಿ ಸದಸ್ಯರಾದ ಅಶ್ವಿನ್ ಸೆಮ್ಲಾನಿ, ಮೊಹಮ್ಮದ್ ಬೇಗ್, ಚಿನ್ನಗುಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.