ಜಿಲ್ಲೆ

ರೈಲ್ವೆ ಮ್ಯಾನ್ಸ್ ಸನ್ ಕೃತಿ ಬಿಡುಗಡೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹುಬ್ಬಳ್ಳಿ ಮೂಲದ ಶಾರ್ಜಾ ಉದ್ಯಮಿ ಡಾ. ಅಲ್ಪೆ ›ಡ್ ಮಿರಾಂಡಾ ಅವರ ಜೀವನ ಚರಿತ್ರೆ ‘ರೈಲ್ವೆ ಮ್ಯಾನ್ಸ್ ಸನ್’ ಕೃತಿ ಬಿಡುಗಡೆ ಕಾರ್ಯಕ್ರಮ ಇಲ್ಲಿನ ಕೇಶ್ವಾಪುರದ ವುಡ್​ಲ್ಯಾಂಡ್ ಹೋಟೆಲ್​ನಲ್ಲಿ ಏ. 6ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಉದ್ಯಮಿ ಸತೀಶ ಡಬೀರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಡುಗಡೆಗೊಳಿಸುವರು. ರೈಲ್ವೆ ಉದ್ಯೋಗಿಯ ಪುತ್ರ ಡಾ. ಅಲ್ಪೆ ›ಡ್ ಮಿರಾಂಡಾ ಅವರ ಜೀವನ ಚರಿತ್ರೆಯನ್ನು ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಅವರು ಬರೆದಿದ್ದು, ಅವರು ಸಹ ರೈಲ್ವೆ ಉದ್ಯೋಗಿಯ ಪುತ್ರರಾಗಿದ್ದಾರೆ ಎಂದರು.

ಡಾ. ಅಲ್ಪೆ ›ಡ್ ಮಿರಾಂಡಾ ಅವರ ಜೀವನ ಚರಿತ್ರೆಯು ಉದ್ಯಮಿಯಾಗ ಬಯಸುವ ಯುವಕರಿಗೆ ಮಾರ್ಗದರ್ಶಿಯಾಗಿದೆ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮಾಜಿ ಸಂಸದ ಐ.ಜಿ. ಸನದಿ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ, ಫಾತಿಮಾ ಪಿಯು ಕಾಲೇಜಿನ ಪ್ರಾಚಾರ್ಯ ಫಾ. ಫೆಲಿಕ್ಸ್ ಮೊಂಟೀರೊ, ಸೇಂಟ್ ಮೇರಿಸ್ ಪ್ರೌಢ ಶಾಲೆಯ ಪ್ರಾಚಾರ್ಯ ಫಾ. ಥಾಮಸ್ ಚಂಪ್ಕಾರ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಸುನಿಲ ನಲವಡೆ, ನಿನಾದ ಭಾಗವತ, ಸಂಜೀವ ಕುಲಕರ್ಣಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.