ರಾಮದುರ್ಗ: ಪಟ್ಟಣಕ್ಕೆ ಹೊಸ ರೈಲ್ವೆ ಮಾರ್ಗ ಜೋಡಿಸುವಂತೆ ಒತ್ತಾಯಿಸಿ ನ್ಯಾಷನಲ್ ಹ್ಯೂಮನ್ ರೈಟ್ಸ್ ಸಂಸ್ಥೆ ನೇತೃತ್ವದಲ್ಲಿ ಸಾರ್ವಜನಿಕರು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಸ್ಥೆ ಅಧ್ಯಕ್ಷ ಬಿ.ಯು.ಭೈರಕದಾರ ಮಾತನಾಡಿ, ಹಲವು ವರ್ಷಗಳಿಂದ ಸಚಿವರಿಗೆ, ಜಿಲ್ಲಾಧಿಕಾರಿ, ಶಾಸಕರಿಗೆ ಮನವಿ ಸಲ್ಲಿಸಲಾಗುತ್ತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಬಸವರಾಜ ಗುರೆಡ್ಡಿ, ದಾದಾಪೀರ ಕೆರೂರ, ಸೋಹೆಲ್ ಭೈರಕದಾರ, ವಕೀಲ ಎಸ್.ಬಿ.ಪಾಟೀಲ, ಎಂ.ಜಿ.ಸೋರಿ, ಜಿ.ಬಿ.ಅಮಟೂರ, ಸಲೀಂ ಕೆರೂರ, ಸದ್ದಾಂ ಮೋಕಾಶಿ, ಬಿ.ಎಚ್.ಬಣೆನ್ನವರ, ಸಾತಪ್ಪ ಹುರಕಡ್ಲಿ, ಫರ್ವೇಜ್ ಣಿ ಇತರರಿದ್ದರು.