ಜಿಲ್ಲೆ

ವಾಹನ ಸವಾರರಿಗೆ ರೈಲ್ವೆ ಗೇಟ್​ ಕಿರಿಕಿರಿ

ಕೋಲಾರ ಡೆಸ್ಕ್

ಕಾಮಸಮುದ್ರ ಬಳಿ ದಿನಕ್ಕೆ ಹಲವು ಗಂಟೆಗಳ ಕಾಲ ಟ್ರಾಫಿಕ್​, 10 ನಿಮಿಷಕ್ಕೊಮ್ಮೆ ಲಾಕ್​

ಜಿ.ನಾಗರಾಜ್​ ಬೂದಿಕೋಟೆ
ಚೆನ್ನೆ&ಬೆಂಗಳೂರು ಮಾರ್ಗದ ಕಾಮಸಮುದ್ರ ರೈಲ್ವೆ ಗೇಟ್​ನಿಂದ ವಾಹನ ಸವಾರರಿಗೆ ನಿತ್ಯ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಿದ್ದು, ಗೇಟ್​ನ ಕಿರಿಕಿರಿಯಿಂದ ಈ ಬಾಗದ ಜನರು ಹೈರಾಣಾಗಿದ್ದಾರೆ.
ಬಂಗಾರಪೇಟೆ ತಾಲೂಕು ಕೇಂದ್ರದಿಂದ ಸುಮಾರು 16 ಕಿಮೀ ದೂರದಲ್ಲಿರುವ ಕಾಮಸಮುದ್ರ ಹೋಬಳಿ ಕೇಂದ್ರಕ್ಕೆ ಪ್ರವೇಶ ಪಡೆಯಲು ರೈಲ್ವೆಗೇಟ್​ ಹೆಬ್ಬಾಗಿಲಿನಂತಿದೆ. ಬೆಂಗಳೂರಿನಿಂದ ಚೆನ್ನೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಇದಾಗಿದ್ದು, ಕನಿಷ್ಠ ಹತ್ತು ನಿಮಿಷಕ್ಕೊಮ್ಮೆ ರೈಲುಗಳು, ಸರಕು ತುಂಬಿರುವ ಗೂಡ್ಸ್​ ರೈಲು ಸಂಚರಿಸುತ್ತವೆ. ಈ ಮಾರ್ಗದಲ್ಲಿ ನಿತ್ಯ ಸುಮಾರು 150 ರೈಲುಗಳು ಸಂಚರಿಸುತ್ತವೆ. ಆದರೆ, ಈ ಮಾರ್ಗ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ವ್ಯಾಪನಪಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಕಾಮಸಮುದ್ರದಿಂದ ಬಂಗಾರಪೇಟೆ ಮತ್ತು ಕೆಜಿಎಫ್​ಗೆ ತೆರಳಲು ಇದೇ ರೈಲ್ವೆ ಟ್ರಾ$್ಯಕ್​ ದಾಟಿಯೇ ಹೋಗಬೇಕು. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳು ಪ್ರತಿ ಹತ್ತು&ಹದಿನೈದು ನಿಮಿಷಕ್ಕೆ ಕನಿಷ್ಠ 10 ರಿಂದ 15 ನಿಮಿಷ ಕಾಯುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ವಾಹನಗಳ ದಟ್ಟಣೆ ಇರುತ್ತದೆ. ಆಂಬುಲೆನ್ಸ್​ ನಂಥ ತುರ್ತು ವಾಹನ ಬಂದರೂ ರೈಲು ಬಂದು ಹೋಗುವವರೆಗೂ ಕಾಯಲೇಬೇಕಾದ ಪರಿಸ್ಥಿತಿ ಇದೆ.
ಮೇಲ್ಸೇತುವೆ ನಿರ್ಮಾಣ ಮಾಡಲಿ: ಈ ಸಮಸ್ಯೆಗೆ ಮುಕ್ತಿ ಕಾಣಿಸಲು ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕಾಮಸಮುದ್ರ ಗ್ರಾಮಸ್ಥರು ಈ ಹಿಂದೆ ಸಂಸದರಾಗಿದ್ದ ಎಸ್​.ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಲೋಕಸಭೆ ಚುನಾವಣೆಗೂ ಮುಂಚೆಯೇ ಮೇಲ್ಸೇತುವೆ ನಿರ್ಮಿಸಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಚುನಾವಣೆ ಮುಗಿದು ಹೊಸ ಸಂಸದರು ಆಯ್ಕೆಯಾದರೂ ಇನ್ನೂ ಕಾಮಗಾರಿ ಕಾರ್ಯರೂಪಕ್ಕೆ ಬಂದಿಲ್ಲ. ಹೆಚ್ಚು ಸಮಯ ಕಾಯಬೇಕು ಎನ್ನುವ ವಿಚಾರಕ್ಕೆ ಗೇಟ್​ ಹಾಕುವ ವೇಳೆ ಕೆಲವು ವಾಹನ ಸವಾರರು ನುಗ್ಗುವುದು, ಗೇಟು ಮುಚ್ಚುವ ಹಾಗೂ ತೆಗೆಯುವ ವಿಚಾರದಲ್ಲಿ ವಾಹನ ಸವಾರರು ಗೇಟ್​ಮನ್​ ಜತೆಗೆ ವಾಕ್​ ಸಮರ ನಡೆಸುವ ನಿದರ್ಶನಗಳು ಇವೆ. ಶ್ರೀವೇ ನೂತನ ಸಂಸದ ಎಂ.ಮಲ್ಲೇಶ್​ಬಾಬು, ಮುತುವರ್ಜಿವಹಿಸಿ ಮೇಲ್ಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.


ಮೇಲ್ಸೇತುವೆ ನಿರ್ಮಾಣ ಸಂಬಂಧ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗುವ ನಂಬಿಕೆ ಇದೆ.

ಎಂ.ಮಲ್ಲೇಶ್​ಬಾಬು ಸಂಸದ

ಕಾಮಸಮುದ್ರ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದ್ದು, ಈ ಹಿಂದೆ ಕೆಎಚ್​.ಮುನಿಯಪ್ಪ ಸಂಸದರಾಗಿದ್ದಾಗ ಸರ್ವೇ ನಡೆದಿತ್ತು. ನಂತರ ಆಯ್ಕೆಯಾದ ಎಸ್​.ಮುನಿಸ್ವಾಮಿ ನೇತೃತ್ವದಲ್ಲಿ ಮಣ್ಣು ಪರೀೆ ಮಾಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿಲ್ಲ. ಆಂಬುಲೆನ್ಸ್​ ಸೇರಿ ತುರ್ತು ಸೇವೆಗಳಿಗೂ ಅನನುಕೂಲವಾಗಿದ್ದು, ನೂತನ ಸಂಸದರು ಮೇಲ್ಸೇತುವೆ ನಿರ್ಮಿಸಲು ಮುಂದಾಗಬೇಕು.

ಪಿಚ್ಚಳ್ಳಿ ಗೋವಿಂದರಾಜುಲುಡಿಸಿಸಿ ಬ್ಯಾಂಕ್​ ನಿರ್ದೇಶಕ