ಕೊಪ್ಪಳದ ಕುಷ್ಟಗಿ ರಸ್ತೆಯ ರೈಲ್ವೇ ಗೇಟ್ ಮೇಲ್ಸೇತುವೆ ಕಾಮಗಾರಿಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಗುರುವಾರ ವೀಕ್ಷಿಸಿ, ಸವಾರರಿಗೆ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಎಸ್ಪಿ ಯಶೋದ ವಂಟಗೋಡಿ, ಎಸಿ ಮಹೇಶ ಮಾಲಗಿತ್ತಿ ಇದ್ದರು. 
ಜಿಲ್ಲೆ

ವಾಹನ ಸವಾರರಿಗೆ ಸಂಚರಿಸಲು ಅವಕಾಶ ಕಲ್ಪಿಸಿ

ಪ್ರವೀಣ ಉದುಸಾ ದಲಬಂಜನ್

ಕೊಪ್ಪಳ: ರೈಲ್ವೇ ಮೇಲ್ಸೇತುವೆ ಕಾಮಗಾರಿ ಜತೆಗೆ ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಗುತ್ತಿಗೆದಾರರಿಗೆ ಸೂಚಿಸಿದರು.

ದೊಡ್ಡ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಿ

ನಗರದ ಕುಷ್ಟಗಿ ರಸ್ತೆಯ ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು. ಸದ್ಯ ಬೈಕ್ ಸವಾರರಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ಬೈಕ್ ಜತೆಗೆ ಆಂಬುಲೆನ್ಸ್, ಕಾರ್ ಹಾಗೂ ಎತ್ತಿನ ಬಂಡಿಗೆ ಸಂಚರಿಸಲು ನಾಳೆಯಿಂದಲೇ ಅವಕಾಶ ನೀಡಬೇಕು. ಒಂದು ಕಡೆ ಕಾಮಗಾರಿ ಮಾಡಬೇಕು. ಮತ್ತೊಂದು ಕಡೆ ವಾಹನ ಸವಾರರಿಗೆ ಸಂಚರಿಸಲು ಅವಕಾಶ ಒದಗಿಸಿ ಎಂದರು.

ಇದನ್ನೂ ಓದಿ:

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಎಸ್ಪಿ ಯಶೋದಾ ವಂಟಗೋಡಿ, ಎಸಿ ಮಹೇಶ ಮಾಲಗಿತ್ತಿ, ನಗರಸಭೆಯ ಸದಸ್ಯರಾದ ವಿರುಪಣ್ಣ ಮೋರನಾಳ, ಅಕ್ಬರ್ ಪಲ್ಟನ್, ಜಿಲ್ಲಾ ವಕ್ತರಾ ಕುರಗೋಡ್ ರವಿ ಇತರರಿದ್ದರು.