ಜಿಲ್ಲೆ

ಶಿರೂರು ರೈಲ್ವೇ ಗೇಟ್​ ಸಂಚಾರ ನಿಷೇಧ

ಗೋಪಾಲಕೃಷ್ಣ ಪಾದೂರ್

ಉಡುಪಿ: ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿರುವ ಎಲ್ಸಿ ಗೇಟ್​ ನಂ.71 ರಲ್ಲಿ ರೈಲುಗಳು ಸಂಚರಿಸುವ ಸಮಯದಲ್ಲಿ ಗೇಟ್​ ಮುಚ್ಚುವುದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಹೀಗಾಗಿ ಇಲಾಖೆಯಿಂದ ನಿರ್ಮಿಸಿದ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಹಾಗೂ ಪ್ರಸ್ತುತ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಬೈಂದೂರು ತಾಲೂಕಿನ ಶಿರೂರು ಗ್ರಾಮದ ಗೇಟ್​ 71ರ ರಸ್ತೆ ಮೂಲಕ ಹಾದುಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೆೇಧಿಸಲಾಗಿದೆ. ಇದರ ಬದಲೀ ಮಾರ್ಗವಾಗಿ ಎಲ್ಲಾ ವಾಹನಗಳು ಶಿರೂರು ಟೋಲ್​ ಗೇಟ್​ ನಿಂದ ಸುಮಾರು 500 ಮೀಟರ್​ ಹಿಂದಕ್ಕೆ ದುರ್ಗಾಂಬಿಕಾ ಹಾಲ್​ ಹಾಗೂ ಶಿರೂರು ಕೆರೆಕಟ್ಟೆ ಬಸ್​ ನಿಲ್ದಾಣದ ಬಳಿ ಇರುವ ರಸ್ತೆಯಿಂದ ರೈಲ್ವೇ ಓವರ್​ ಬ್ರಿಡ್ಜ್​ ಮೂಲಕ ಗೇಟ್​ ನಂ. 71 ರ ಪಕ್ಕದ ಪಶ್ಚಿಮ ದಿಕ್ಕಿನಲ್ಲಿ ರೇಲ್ವೆ ಇಲಾಖೆಯಿಂದ ಹೊಸದಾಗಿ ನಿಮಾರ್ಣ ಆಗಿರುವ ರಸ್ತೆ ಮೂಲಕ ಸಂಚರಿಸಬೇಕು. ಪ್ರಸ್ತುತ ಇರುವ ಗೇಟ್ನಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ದಾಟುವ ಬಗ್ಗೆ ವಿಕೇಟ್​ ಗೇಟ್​ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.