ಜಿಲ್ಲೆ

ನೈಋತ್ಯ ರೈಲ್ವೆಗೆ ಚಾಂಪಿಯನ್​ಶಿಪ್

ಹುಬ್ಬಳ್ಳಿ :ರಾಯಬರೇಲಿಯಲ್ಲಿ ಆ. 9 ರಿಂದ 11ರವರೆಗೆ ಆಯೋಜಿಸಿದ್ದ ಆಲ್ ಇಂಡಿಯಾ ಇಂಟರ್ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ನೈಋತ್ಯ ರೈಲ್ವೆ ವಲಯದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.

136 ಅಂಕಗಳೊಂದಿಗೆ ನೈಋತ್ಯ ರೈಲ್ವೆ ವಲಯ ಚಾಂಪಿಯನ್​ಶಿಪ್ ಪಟ್ಟ ಪಡೆದುಕೊಂಡಿತು. ಸದನ್ ರೈಲ್ವೆ 110 ಅಂಕಗಳೊಂದಿಗೆ ಮೊದಲ ರನ್ನರ್ ಅಪ್ ಹಾಗೂ 101 ಅಂಕಗಳೊಂದಿಗೆ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಪಶ್ಚಿಮ ರೈಲ್ವೆ ತೃಪ್ತಿಪಟ್ಟುಕೊಂಡಿತು.

ನೈಋತ್ಯ ರೈಲ್ವೆ ವಲಯದ ಕ್ರೀಡಾಪಟುಗಳು ಒಟ್ಟಾರೆ ಚಾಂಪಿಯನ್​ಶಿಪ್ ಜತೆಗೆ ವೈಯಕ್ತಿಕ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು, ಪುರುಷರ ತಂಡ ಚಾಂಪಿಯನ್​ಶಿಪ್ ಪಡೆದುಕೊಂಡರೆ, ಮಹಿಳಾ ತಂಡ 2ನೇ ರನ್ನರ್ ಅಪ್​ಗೆ ಕಾಲಿಟ್ಟಿತು.

ಪುರುಷರ ವಿಭಾಗಕ್ಕೆ 2 ಚಿನ್ನದ ಪದಕ, 6 ಬೆಳ್ಳಿ ಪದಕ ಹಾಗೂ ಒಂದು ಕಂಚಿನ ಪದಕಗಳು ದೊರೆತವು. ಮಹಿಳಾ ವಿಭಾಗಕ್ಕೆ 4 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕಗಳು ಬಂದವು.