ಜಿಲ್ಲೆ

ರೈಲು ಸಂಚಾರ ವಿಸ್ತರಣೆ

ಹುಬ್ಬಳ್ಳಿ : ಬಹುದಿನಗಳ ಬೇಡಿಕೆಯಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ - ಗದಗ- ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ ಹಾಗೂ ಸೊಲ್ಲಾಪೂರ- ಗದಗ- ಸೊಲ್ಲಾಪೂರ ರೈಲುಗಳ ಸಂಚಾರವನ್ನು ಹೊಸಪೇಟೆವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಸಮ್ಮತಿ ನೀಡಿದೆ.

ಈ ರೈಲುಗಳ ಸಂಚಾರ ವಿಸ್ತರಣೆಯಿಂದ ಕೊಪ್ಪಳ ಮತ್ತು ಹೊಸಪೇಟೆಯಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ದೊರೆತಂತಾಗಿದೆ.

ಸಂಚಾರ ವಿಸ್ತರಣೆಗೊಂಡ ಎರಡೂ ರೈಲುಗಳಿಗೆ ಬಳ್ಳಾರಿ ಸಂಸದ ಕರಡಿ ಸಂಗಣ್ಣ ಅವರು ಆ. 29ರಂದು ಕೊಪ್ಪಳದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ- ಹೊಸಪೇಟೆ - ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ ರೈಲು ಆ. 28 ರಿಂದ ರಾತ್ರಿ 9.20ಕ್ಕೆ ಛತ್ರಪತಿ ಶಿವಾಜಿ ಟರ್ವಿುನಸ್ ಮುಂಬೈನಿಂದ ಹೊರಟು, ಮಾರನೇ ದಿನ ಮಧ್ಯಾಹ್ನ 12.45ಕ್ಕೆ ಹೊಸಪೇಟೆ ನಿಲ್ದಾಣ ತಲುಪಲಿದೆ.

ಮರು ದಿಕ್ಕಿನಲ್ಲಿ ಆ. 29 ರಿಂದ ಮಧ್ಯಾಹ್ನ 2 ಗಂಟೆಗೆ ಹೊಸಪೇಟೆಯಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗ್ಗೆ 5.10ಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ ತಲುಪಲಿದೆ.

ಸೊಲ್ಲಾಪೂರ-ಹೊಸಪೇಟೆ-ಸೊಲ್ಲಾಪೂರ ಎಕ್ಸ್​ಪ್ರೆಸ್ ರೈಲು ಆ. 29 ರಿಂದ ಬೆಳಗ್ಗೆ 11.50ಕ್ಕೆ ಸೊಲ್ಲಾಪೂರದಿಂದ ಹೊರಟು, ಅದೇ ದಿನ ರಾತ್ರಿ 10 ಗಂಟೆಗೆ ಹೊಸಪೇಟೆ ತಲುಪಲಿದೆ. ಮರು ದಿಕ್ಕಿನಲ್ಲಿ ಆ. 30 ರಿಂದ ಮಧ್ಯರಾತ್ರಿ 12.15ಕ್ಕೆ ಹೊಸಪೇಟೆಯಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗ್ಗೆ 9.30ಕ್ಕೆ ಸೊಲ್ಲಾಪೂರ ನಿಲ್ದಾಣ ತಲುಪಲಿದೆ.