ಮಂಗಳೂರು : ಪಾಲಕ್ಕಾಡ್ ರೈಲ್ವೆ ವಿಭಾಗದ ಕೆಲವು ರೈಲು ಮಾರ್ಗಗಳಲ್ಲಿ ಘೋಷಣೆ ಮಾಡಿದ್ದ ವೇಳಾ ಪಟ್ಟಿ ಬದಲಾವಣೆಯನ್ನು ರದ್ದು ಪಡಿಸಲಾಗಿದೆ. ಪೂರ್ವ ವೇಳಾಪಟ್ಟಿಯನ್ವಯ ರೈಲುಗಳು ಸಂಚರಿಸಲಿವೆ.
ಅಲಪ್ಪುಜ-ಕಣ್ಣೂರು ಎಕ್ಸ್‌ಪ್ರೆಸ್ (ರೈಲು ನಂ.16307) ಜೂ.1ರಂದು ಮಧ್ಯಾಹ್ನ 3.30ಕ್ಕೆ ಅಲಪ್ಪುಜದಿಂದ ನಿರ್ಗಮಿಸಲಿದೆ.
ಕೊಚುವೇಲಿ -ಶ್ರೀ ಗಂಗಾನಗರ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ನಂ.16312) ಜೂ.1ರಂದು ಮಧ್ಯಾಹ್ನ 3.45ಕ್ಕೆ ಕೊಚುವೇಲಿಯಿಂದ ನಿರ್ಗಮಿಸಲಿದೆ. ಕೊಚುವೇಲಿ-ಲೋಕಮಾನ್ಯ ತಿಲಕ್ ಟರ್ಮಿನಲ್ ವೀಕ್ಲಿ ಸ್ಪೆಷಲ್ (ರೈಲು ನಂ.01464) ಜೂ.1ರಂದು ಸಾಯಂಕಾಲ 4.20ಕ್ಕೆ ಕೊಚುವೇಲಿಯಿಂದ ನಿರ್ಗಮಿಸಲಿದೆ.
ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ -ಮಂಗಳೂರು ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ನಂ.22637) ಜೂ.1ರಂದು ಮಧ್ಯಾಹ್ನ 1.25ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿರ್ಗಮಿಸಲಿದೆ. ಶೊರ್ನೂರು ಜಂಕ್ಷನ್-ಕೊಯಮುತ್ತೂರು ಜಂಕ್ಷನ್ ಪ್ಯಾಸೆಂಜರ್ ಸ್ಪೆಷಲ್ (ರೈಲು ನಂ.06458) ಜೂ.1 ಮತ್ತು 5ರಂದು ಬೆಳಗ್ಗೆ 8.20ಕ್ಕೆ ಶೊರ್ನೂರು ಜಂಕ್ಷನ್‌ನಿಂದ ನಿರ್ಗಮಿಸಲಿದೆ.
ಮಧುರೈ ಜಂಕ್ಷನ್-ತಿರುವನಂತಪುರಂ ಸೆಂಟ್ರಲ್ ಅಮೃತ ಎಕ್ಸ್‌ಪ್ರೆಸ್ (ರೈಲು ನಂ.16344) ಜೂ.5ರಂದು ಸಾಯಂಕಾಲ 4.10ಕ್ಕೆ ಮಧುರೈ ಜಂಕ್ಷನ್‌ನಿಂದ ನಿರ್ಗಮಿಸಲಿದೆ. ಕೊಯಮುತ್ತೂರು ಜಂಕ್ಷನ್ -ಶೊರ್ನೂರು ಜಂಕ್ಷನ್ ಪ್ಯಾಸೆಂಜರ್ ಸ್ಪೆಷಲ್ (ರೈಲು ನಂ.06459) ಜೂ.1ರಂದು ಸಾಯಂಕಾಲ 4.30ಕ್ಕೆ ಶೊರ್ನೂರು ಜಂಕ್ಷನ್‌ನಿಂದ ನಿರ್ಗಮಿಸಲಿದೆ.
.......................