ಜಿಲ್ಲೆ

ಮದ್ಯ ಅಕ್ರಮ ಮಾರಾಟ ಅಡ್ಡೆಗೆ ದಾಳಿ

ಸೌಮ್ಯ ಆರ್

ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಹಾಗೂ ಗರ್ಡಾಡಿಯಲ್ಲಿ ನಡೆಯುತ್ತಿದ್ದ ಮದ್ಯ ಅಕ್ರಮ ಮಾರಾಟ ಕೇಂದ್ರಗಳಿಗೆ ಪೊಲೀಸರು ದಾಳಿ ನಡೆಸಿದ್ದು, ಮದ್ಯ ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ.

ಗರ್ಡಾಡಿ ಗ್ರಾಮದ ಡಂಜೋಳಿ ಕ್ರಾಸ್ ಸಮೀಪ ಇರುವ ಗರ್ಡಾಡಿ ಕೋಳಿ ಫಾರ್ಮ್ಸ್ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಮದ್ಯದ ಬಾಟ್ಲಿಗಳು ಪತ್ತೆಯಾಗಿವೆ. ಆರೋಪಿ ಗೋಪಾಲ ಪೂಜಾರಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಹೊಸಂಗಡಿ ಗ್ರಾಮದ ಚಂದ್ರಕಾಂತ್ ಎಂಬಾತನಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ವೇಣೂರು ಪೊಲೀಸರು ದಾಳಿ ನಡೆಸಿದಾಗ ಮಾರಾಟ ಮಾಡಲು ಶೇಖರಿಸಿಟ್ಟಿರುವ ಮದ್ಯದ ಪ್ಯಾಕೆಟ್‌ಗಳು ಕಂಡು ಬಂದಿವೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.