ಗಂಗೊಳ್ಳಿ: ಆಲೂರು ಗ್ರಾಮದ ಆಲೂರು ಹಾಡಿಮನೆಯಲ್ಲಿ ಪಾರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವುದಾಗಿ ಆಲೂರು ಗ್ರಾಮದ ಬೀಟ್ ಸಿಬ್ಬಂದಿ ನೀಡಿದ ಮಾಹಿತಿಯಂತೆ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದರು. ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ದಾಳಿ ಮಾಡಿ ಸ್ಥಳದಲ್ಲಿದ್ದ ಮಿನಿ ಟಿಪ್ಪರ್, ಟಿಪ್ಪರ್‌ನಲ್ಲಿ ಲೋಡ್ ಮಾಡಿದ 100 ಕೆಂಪು ಕಲ್ಲುಗಳು, ಟಿಲ್ಲರ್, ಹಾರೆ, ಪಿಕ್ಕಾಸು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಪರಾರಿಯಾಗಿದ್ದಾರೆ. ಆಲೂರಿನ ಉದಯ ಎಂಬಾತ ಯಾವುದೇ ಪರವಾನಗಿ ಇಲ್ಲದೆ ಕೆಂಪು ಕಲ್ಲು ಕ್ವಾರಿ ನಡೆಸುತ್ತಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.