ಜಿಲ್ಲೆ

ಹೈಟೆಕ್ ಜೂಜಾಟ ಕೇಂದ್ರಕ್ಕೆ ದಾಳಿ : ಆರು ಮಂದಿ ಬಂಧನ

ಸೌಮ್ಯ ಆರ್

ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಅಡ್ಯನಡ್ಕ ಸನಿಹದ ಕುಞಿಪ್ಪಾರೆ ಎಂಬಲ್ಲಿ ನಡೆಯುತ್ತಿದ್ದ ಹೈಟೆಕ್ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಬದಿಯಡ್ಕ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿ, ಇವರಿಂದ ಜೂಜಿಗೆ ಬಳಸಿದ್ದರೆನ್ನಲಾದ 1,03,820 ರೂ. ನಗದು ವಶಪಡಿಸಿಕೊಂಡಿದ್ದಾರೆ. ಅಡ್ಯನಡ್ಕ ಚವರ್ಕಾಡು ನಿವಾಸಿ ಕೆ.ಗಿರೀಶ್, ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ಹನೀಫಾ, ಬಲ್ಲಾಲ್‌ಬಾಗ್ ಪಂಜಿಗುಡ್ಡೆ ನಿವಾಸಿ ರಾಜ, ವಿಟ್ಲ ನಿವಾಸಿ ಪ್ರಶಾಂತ್, ಎಣ್ಮಕಜೆ ಪಳ್ಳಕ್ಕಾನ ನಿವಾಸಿ ಅಬ್ದುಲ್ಲ, ಮಂಗಳೂರು ಕುಂಜುಮುಗರು ನಿವಾಸಿ ರಾಧಾಕೃಷ್ಣನ್ ನಾಯರ್ ಬಂಧಿತರು. ಬದಿಯಡ್ಕ ಠಾಣೆ ಎಸ್‌ಐ ಟಿ.ಅಖಿಲ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಕೇರಳ ಹಾಗೂ ಕರ್ನಾಟಕದ ನಾನಾ ಕಡೆಯಿಂದ ಇಲ್ಲಿಗೆ ಜೂಜಾಟಕ್ಕೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.