ಜಿಲ್ಲೆ

ಜೂಜು ಅಡ್ಡೆಮೇಲೆ ದಾಳಿ, ನಾಲ್ವರ ಬಂಧನ

ರೇಷ್ಮೆ ನಗರ ಡೆಸ್ಕ್

ಕುದೂರು: ತಿಪ್ಪಸಂದ್ರ ಹೋಬಳಿಯ ಜಾನಿಗೆರೆಯ ತೆಂಗಿನ ತೋಟದಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಕುದೂರು ಪೊಲೀಸರು ಇತ್ತೀಚೆಗೆ ಬಂಧಿಸಿ, 2 ಕಾರು, ಒಂದು ಆಟೋ ಹಾಗೂ 1 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.

ತುಮಕೂರು ನಗರದ ವೀರೇಶ್​, ಪವನ್​, ಹೆಬ್ಬೂರು ಹೋಬಳಿಯ ವನಸಿಗೆರೆಯ ಕಿರಣ್​ ಕುಮಾರ್​, ಗೂಳೂರು ಹೋಬಳಿ ಟಿ.ಜಿ.ಪಾಳ್ಯದ ತಿರುಮಲ್ಲಯ್ಯ ಬಂಧಿತರು. ಗೂಳೂರು ಹೋಬಳಿಯ ಬಿದರಕಟ್ಟೆಯ ಸಿದ್ದೇಗೌಡ, ಉಪ್ಪಾರಹಳ್ಳಿಯ ನಾಗೇಂದ್ರ, ತುಮಕೂರಿನ ವೆಂಕಟೇಶ್​, ಕಿಟ್ಟಿ, ಹರ್ಷ, ಪುಟ್ಟಮಲ್ಲಿ, ರಂಗಸ್ವಾಮಿ, ಕುದೂರು ಹೋಬಳಿಯ ಮಲ್ಲಸಂದ್ರ ಗ್ರಾಮದ ಹನುಮಂತ ತಪ್ಪಿಸಿಕೊಂಡಿದ್ದು, ಆರೋಪಿತರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಕುದೂರು ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಸರ್ದಾರ್​ ಸಾಬ್​ ಮತ್ತು ಸಿಬ್ಬಂದಿ ಸತೀಶ್​, ಸೂರ್ಯಕುಮಾರ್​, ನಾಗರಾಜು, ಶಿವರಾಜು, ಅಪ್ಪಾಸಾಬ್​, ದರ್ಶನ್​, ಮಧು, ಅಭಿಷೇಕ್​ ದಾಳಿ ನಡೆಸಿದ್ದರು. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.