ದೇವದುರ್ಗದಲ್ಲಿ ಸಂವಿಧಾನ ಸಂರಕ್ಷಣೆ ಪಡೆಯಿಂದ ಪ್ರತಿಭಟನೆ ನಡೆಯಿತು. ತಾಲೂಕು ಸಂಚಾಲಕ ವಿಶ್ವನಾಥ ಬಲ್ಲಿದವ್, ಮುಖಂಡರಾದ ಶರಣಗೌಡ ಗೌರಂಪೇಟೆ, ಹನುಮಂತ ದೊರೆ, ಹನುಮಂತ ಮನ್ನಾಪುರ, ವಾಸುದೇವ ನಾಯಕ ವಕೀಲ, ಬಾಬು ಗೌರಂಪೇಟೆ, ರಂಗನಾಥ, ಜಯರಾಜ್ ಇತರರಿದ್ದರು. Shashidhara L
ರಾಯಚೂರು

ವಿಪಕ್ಷ-ದಲಿತರು ಕೇಂದ್ರದ ಗುರಿ

ಸಂವಿಧಾನ ಸಂರಕ್ಷಣೆ ಪಡೆ ನೇತೃತ್ವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

and are the Centre's.

ದೇವದುರ್ಗ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ಮಾಡಿರುವುದನ್ನು ಖಂಡಿಸಿ ಮಿನಿವಿಧಾನಸೌಧ ಮುಂದೆ ಸಂವಿಧಾನ ಸಂರಕ್ಷಣೆ ಪಡೆ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು.

ತಾಲೂಕು ಸಂಚಾಲಕ ವಿಶ್ವನಾಥ ಬಲ್ಲಿದವ್ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಮಾಡಿರುವುದು ಖಂಡನೀಯ. ಕೇಂದ್ರ ಸರ್ಕಾರ ದಲಿತರನ್ನು ಹಾಗೂ ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿದಂತೆ ಇತರ ಸ್ವತಂತ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಮುಂದಾಗಿದೆ. ದಲಿತ ಎನ್ನುವ ಕಾರಣಕ್ಕೆ ಸತೀಶ್ ಜಾರಕಿಹೊಳಿಯನ್ನು ಕೇಂದ್ರ ಸರ್ಕಾರ ಟಾರ್ಗೇಟ್ ಮಾಡಿದೆ ಎಂದು ಆರೋಪಿಸಿದರು.

ಮುಖಂಡರಾದ ಶರಣಗೌಡ ಗೌರಂಪೇಟೆ, ಹನುಮಂತ ದೊರೆ, ಹನುಮಂತ ಮನ್ನಾಪುರ, ವಾಸುದೇವ ನಾಯಕ ವಕೀಲ, ಬಾಬು ಗೌರಂಪೇಟೆ, ರಂಗನಾಥ, ಜಯರಾಜ ಇತರರಿದ್ದರು.