ರಾಯಚೂರಿನ ಕೃಷಿ ವಿವಿಯ ಮುಖ್ಯ ವೇದಿಕೆಯಲ್ಲಿ ಶನಿವಾರ ಸಂಜೆ ವಿಜಯಪ್ರಕಾಶ್ ಕನ್ನಡ ಗೀತೆಗಳನ್ನು ಹಾಡಿದರು. 
ರಾಯಚೂರು

ಉತ್ಸವದ ಕಡೆಯ ದಿನ ವಿಪಿ ಹಾಡಿಗೆ ಹುಚ್ಚೆದ್ದು ಕುಣಿದ ಯುವಕರು

ಪ್ರಮುಖ ಮುಖ್ಯಾಂಶಗಳು

  • ಮೈನವಿರೇಳಿಸಿದ ಗಾಯಕರ ಕಂಠಸಿರಿ
  • ಗೀತಗಾಯನಕ್ಕೆ ಮೈಮರೆತು ಹೆಜ್ಜೆ ಹಾಕಿದ ಯುವಪಡೆ
ರಾಯಚೂರು: ಕನ್ನಡದ ಅಪ್ಪು ನೆನಪಲ್ಲಿ ಮಿಂದೆದ್ದ ಜನತೆ. ಯಾರೇ ಬಂದರೂ ಎದುರಾರೇ ನಿಂತರೂ ಪ್ರೀತಿ ಹಂಚುವ ಎಂದ ವಿಜಯ್ ಪ್ರಕಾಶ್.. ಕಾಣದಂತೆ ಮಾಯವಾದನೋ ನಮ್ಮ ಶಿವ.. ಹಾಡಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು.. ಯುವಕ ಯುವತಿಯರನ್ನು ಮೋಡಿ ಮಾಡಿದ ವಿಜಯ್ ಪ್ರಕಾಶ್ ‘ಕಿರಿಕ್’ ಪಾರ್ಟಿ..
ರಾಯಚೂರು ಜಿಲ್ಲಾ ಉತ್ಸವದ ಕಡೆಯ ದಿನ ಖ್ಯಾತ ಹಾಡುಗಾರ ವಿಜಯ್ ಪ್ರಕಾಶ್ ಹಾಡುಗಳಿಗೆ ರಾಯಚೂರು ಜನತೆ ತಲೆದೂಗಿದರು. ಅಷ್ಟೇ ಅಲ್ಲ ಆಸನಗಳನ್ನು ಬಿಟ್ಟೆದ್ದು ಕಾರ್ಯಕ್ರಮದ ಆರಂಭದಿಂದ ಕಡೆಯವರೆಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ನಟ ಅಪ್ಪು ಅವರ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಹಾಡಿ ರಂಜಿಸಿದ ವಿಪಿ ಅವರು ಆನಂತರ ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ ಎಂದು ಜನರಿಗೂ ಹಾಡಿಸಿ ಹರ್ಷಪಟ್ಟರು. ಹಾಗೆಯೇ ಸೇರಿದ್ದ ಸಾವಿರಾರು ಜನರ ಮಧ್ಯೆಯೇ ಎರಡು ಗುಂಪಾಗಿಸಿ ಹಾಡು ಹಾಡಿಸಿ, ಅಂಕಗಳನ್ನು ನೀಡಿ ಮುಂದಿನ ಸಲಕಪ್ ನಿಮ್ಮದು ಎಂದು ಸ್ಪರ್ಧೆಲಿ ಸೋತವರಿಗೆ ಹುರಿದುಂಬಿಸಿದರು.
ಕಾರ್ಯಕ್ರಮದ ನಡುನಡುವೆ ರಾಯಚೂರು ಎಂದು ಕರೆದು ಸ್ಫೂರ್ತಿ ಚಿಲುಮೆ ಚಿಮ್ಮುವಂತೆ ಮಾಡಿದರು. ಅವರ ಕಾರ್ಯಕ್ರಮ ತಡವಾಗಿ ಆರಂಭವಾದರೂ ಮನೆಗೆ ತೆರಳದೆ ಕಾದಿದ್ದ ಜನತೆಗೆ ಅಭಿನಂದಿಸಿದರು. ಹಾಗೆಯೇ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂದೂ ಹೇಳಿದರು.
ಯುವಕರಿಗೂ ಹಾಡತೀನಿ ಜೀವನ್ ಟಾನಿಕ್ ಬಾಟಲು ಕುಡಿಯೋಕ್ ಮುಂಚೆ ಅಲ್ಲಾಡ್ಸು ಎಂದೂ ಹೇಳಿ ಯುವಕರಿಗೆ ಹುಚ್ಚೆಬಿಸಿದರು. ರಾಯಚೂರು ಉತ್ಸವದ ಕಟ್ಟಕಡೆಯ ದಿನ ಶನಿವಾರ ರಾತ್ರಿ ನಡೆದ ವಿಜಯ್ ಪ್ರಕಾಶ್ ಸಿನೆಮಾ ಗೀತೆಗಳ ಹಾಡುಗಾರಿಕೆ ಜನಮನಸೂರೆಗೊಂಡಿತು. ಮಕ್ಕಳು, ಯುವಕರು ವೃದ್ಧರು ಎನ್ನದೇ ಎಲ್ಲರೂ ವಿಪಿ ಹಾಡಿಗೆ ಹೆಜ್ಜೆ ಹಾಕಿದ್ದು ಕಂಡಿತು.