ದೇವದುರ್ಗದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕ್ರೀಡಾಸಂಘ ಹಾಗೂ ವಿದ್ಯಾರ್ಥಿ ಸಂಘ ಸಮಾರೋಪ ಕಾರ್ಯಕ್ರಮವನ್ನು ಪ್ರಾಚಾರ್ಯ ಮಲ್ಲಪ್ಪ ಸರ್ಜಾಪುರ ಉದ್ಘಾಟಿಸಿದರು. ಪ್ರಾಧ್ಯಾಪಕ ಡಾ.ಸುಭಾಶ್ಚಂದ್ರ ಪಾಟೀಲ್, ಉಪನ್ಯಾಸಕರಾದ ಈರಣ್ಣ, ಮಧು, ನಿಸಾರ ಫಾತಿಮಾ, ಶ್ರುತಿಚಾಮ, ಹೊನ್ನಪ್ಪ, ರಮೇಶ, ಎಸ್.ಜಿ.ಪ್ರಕಾಶ, ನಿಜಾನಂದರೆಡ್ಡಿ, ಮುಕ್ತಾಂಬಿಕಾ ಇತರರಿದ್ದರು. 
ರಾಯಚೂರು

ಯುವಕರೇ ಮೊಬೈಲ್ ಗೀಳಿನಿಂದ ಹೊರಬನ್ನಿ

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಗೀಳಿನಿಂದ ಹೊರಬನ್ನಿ

ಯುವಕರೇ ಮೊಬೈಲ್ ಗೀಳಿನಿಂದ ಹೊರಬನ್ನಿ

ದೇವದುರ್ಗ: ಯುವಜನತೆ, ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣದಲ್ಲಿ ಕಾಲಕಳೆಯುತ್ತಿರುವುದು ನೋವಿನ ಸಂಗತಿ. ಅವುಗಳಿಂದ ಹೊರಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಲಿಂಗಸುಗೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ಸರ್ಜಾಪುರ ಹೇಳಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾಸಂಘ ಹಾಗೂ ವಿದ್ಯಾರ್ಥಿ ಸಂಘ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣ ಬದುಕಿಗೆ ಮಾರ್ಗದರ್ಶಕ ಹಾಗೂ ಸಹಕಾರಿ ಆಗಬೇಕೇ ಹೊರತು ಅದೇ ಜೀವನ ಆಗಬಾರದು.
ಯುವಕರು ಮೊಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆ-ತಾಯಿ ನೂರಾರು ಕನಸು ಹೊತ್ತು ಕಾಲೇಜಿಗೆ ಕಳಿಸುತ್ತಾರೆ. ಕಷ್ಟಪಟ್ಟು ಓದಿ ಉನ್ನತ ಹುದ್ದೆ ಪಡೆದು ನನಸು ಮಾಡಬೇಕು ಎಂದರು.
ಪ್ರಾಧ್ಯಾಪಕ ಡಾ.ಸುಭಾಶ್ಚಂದ್ರ ಪಾಟೀಲ್ ಮಾತನಾಡಿ, ಯುವಕರು ಜೀವನದಲ್ಲಿ ಗುರಿ ಇಟ್ಟುಕೊಂಡು ಅಧ್ಯಯನ ಮಾಡಬೇಕು. ನಿರಂತರ ಪರಿಶ್ರಮ, ಶಿಸ್ತು, ಸಮಯ ಪಾಲನೆಯಿಂದ ಗುರಿ ತಲುಪಲು ಸಾಧ್ಯ ಎಂದು ತಿಳಿಸಿದರು.
ಪ್ರಾಚಾರ್ಯ ಯಲ್ಲಪ್ಪ, ಉಪನ್ಯಾಸಕರಾದ ಈರಣ್ಣ, ಮಧು, ನಿಸಾರ ಫಾತಿಮಾ, ಶ್ರುತಿಚಾಮ, ಹೊನ್ನಪ್ಪ, ರಮೇಶ, ಎಸ್.ಜಿ.ಪ್ರಕಾಶ, ನಿಜಾನಂದರೆಡ್ಡಿ, ಮುಕ್ತಾಂಬಿಕಾ ಇತರರಿದ್ದರು.