ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಗುರುವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.ಯುವ ಘಟಕದ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗಟ್ಟು ಬಿಚ್ಚಾಲಿ, ರಾಜ್ಯ ಕಾರ್ಯದರ್ಶಿ ಫೈಸಲ್ ಖಾನ್, ನಗರಾಧ್ಯಕ್ಷ ಮಹ್ಮದ್ ಲೈಬಾದ್, ಪ್ರಮುಖರಾದ ರವಿ ಬೋಸರಾಜು, ಮಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಖರೀಮ್, ಎಂ.ಆರ್.ಭೇರಿ, ಮಲ್ಲೇಶ ಕೊಲಿಮಿ, ವಿಶ್ವನಾಥ ಪಟ್ಟಿ, ಯೂಸೂಫ್ ಖಾನ್, ಡಾ. ದಾದಪೀರ, ಅರುಣ ದೋತರಬಂಡಿ, ಕೆ. ರಾಘವೇಂದ್ರ, ಎಂ.ಡಿ. ಜಾವಿದ್, ಪ್ರತಾಪ್ ರೆಡ್ಡಿ, ಪ್ರವೀಣ್ ಕುಮಾರ ಗುಡಿಸಿ ಇದ್ದರು. 
ರಾಯಚೂರು

ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಶಿಕ್ಷಣ ಸಚಿವ ರಾಜಿನಾಮೆಗೆ ಒತ್ತಾಯ
ರಾಯಚೂರು 
ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನ್ಯಾಯವಾಗಿದ್ದು, ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗಾಗಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸುತ್ತಿದೆ. ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ವಿದ್ಯಾರ್ಥಿಗಳ ಪರವಾಗಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿವೆ. 
ಅದೇ ರೀತಿ ಸಾಮಾಜಿಕ  ಹೋರಾಟಗಾರ ಸೋನಂ ವಾಂಗ್ಚುಕ್ ಕಳೆದ 25 ದಿನಗಳಿಂದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕರೆ ನೀಡಿದರು. ತಾವು ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದ್ದರು. ನೀವು ಒಬ್ಬರೇ ಅಲ್ಲ, ದೇಶದಾದ್ಯಂತ ವಿದ್ಯಾರ್ಥಿಗಳು ನಿಮ್ಮ ಜೊತೆಯಲ್ಲಿದ್ದಾರೆ ಎಂಬ ಸಂದೇಶವನ್ನು ಅಲ್ಲಿ ಕಂಡಿದ್ದಾಗಿ ಹೇಳಿದರು.

ವಿದ್ಯಾರ್ಥಿಗಳ ಧ್ವನಿಗೆ ಬಲ ತುಂಬುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛಾತ್ರೋಂಕಿ ಗೂಂಜ್ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಅಭಿಯಾನದ ಮೂಲಕ ದೇಶದಾದ್ಯಂತ ವಿದ್ಯಾರ್ಥಿಗಳ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸುತ್ತಿದೆ. ಇದರ ಆರಂಭ ರಾಜಸ್ಥಾನದ ಕೋಟಾದಲ್ಲಿ ನಡೆದ ಸಮಾವೇಶದಿಂದ ಆಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರಕ್ಷಣೆ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಜು.22ರಂದು ಮರುಪರೀಕ್ಷೆ ನಡೆಸಲಾಯಿತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅಥವಾ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕ್ಷಮೆ ಕೇಳಿಲ್ಲ. ಪರೀಕ್ಷಾ ಪೇ ಚರ್ಚಾ ನಡೆಸುವ ಪ್ರಧಾನಿ, ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮೌನ ವಹಿಸಿರುವುದು ಏಕೆ ಎಂಬುದನ್ನು ದೇಶದ ಜನತೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಮುಖಂಡ ಕೆ.ಶಾಂತಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಬಿಜೆಪಿ ಸರ್ಕಾರ ಆಟವಾಡುತ್ತಿದೆ. ಬಿಜೆಪಿಗೆ ನಾಚಿಕೆಯಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ ಬಿಜೆಪಿಯ ನಾಯಕರು ಮೂಖ ಪ್ರೇಕ್ಷಕರಾಗಿದ್ದಾರೆ. ಅಲ್ಲಿನ ಭದ್ರತಾ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಹೊಡೆಸುತ್ತಿದ್ದಾರೆ. ಮಾತುಕತೆಗೆ ಕರೆಸಿ ವಿದ್ಯಾರ್ಥಿಗಳನ್ನು ಗೃಹ ಬಂಧನದಲ್ಲಿಡುತ್ತಿದ್ದಾರೆ. ಬಿಜೆಪಿ ನಾಟಕವಾಡುತ್ತಾ ಭಾವನಾತ್ಮಕವಾಗಿ ಓಟ್ ಪಡೆದು ಈಗ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕು. ನೈತಿಕ ಹೊಣೆ ಹೊತ್ತು ಸಚಿವ ಧಮೇರ್‌ಂದ್ರ ಪ್ರಧಾನ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ  ಯುವ ಘಟಕದ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗಟ್ಟು ಬಿಚ್ಚಾಲಿ, ರಾಜ್ಯ ಕಾರ್ಯದರ್ಶಿ ಫೈಸಲ್ ಖಾನ್, ನಗರಾಧ್ಯಕ್ಷ ಮಹ್ಮದ್ ಲೈಬಾದ್, ಪ್ರಮುಖರಾದ ಮಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಖರೀಮ್, ಎಂ.ಆರ್.ಭೇರಿ, ಮಲ್ಲೇಶ ಕೊಲಿಮಿ, ವಿಶ್ವನಾಥ ಪಟ್ಟಿ, ಯೂಸೂಫ್ ಖಾನ್, ಡಾ. ದಾದಪೀರ, ಅರುಣ ದೋತರಬಂಡಿ, ಕೆ. ರಾಘವೇಂದ್ರ, ಎಂ.ಡಿ. ಜಾವಿದ್, ಪ್ರತಾಪ್ ರೆಡ್ಡಿ, ಪ್ರವೀಣ್ ಕುಮಾರ ಗುಡಿಸಿ, ಅಬೀಬ್ ಖಾಜಿ, ಮುದಾಸಿ, ಮಧುಕುಮಾರ, ರಾಬರ್ಟ್, ಸೀನು ಅಸ್ಕಿಹಾಳ, ಹುಸೇನ್ ಪಾಷಾ ಇಸ್ಮಾಯಿಲ್ ಮಾಡಗಿರಿ, ಕಿಶೋರ್, ವೀರ ಗಂಗಾಧರ,, ಸಂತೋಷ ಸೊಪ್ಪಿಮಠ, ಲಿಂಗಣ್ಣ ಹವಲ್ದಾರ ನಾಯಕ್ ಸೇರಿ ಅನೇಕರು ಇದ್ದರು.