ರಾಯಚೂರು ಸಾಹಿತಿ ಪಿ.ವೆಂಕಟೇಶ ಬಾಗಲವಾಡ ರಚಿಸಿರುವ ನಿಮಗೆ ತಿಳಿಯುವದಿಲ್ಲ ಬಿಡಿ ಕೃತಿಯನ್ನು ಬಿಡುಗಡೆ ಕಾರ್ಯಕ್ರಮವನ್ನು ನಗರದ ಕರ್ನಾಟಕ ಸಂಘದಲ್ಲಿ ಡಿ.28 ರಂದು ಬೆಳಗ್ಗೆ 10; 30ಕ್ಕೆ ಆಯೋಜನೆ ಮಾಡಲಾಗಿದೆಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರುಳಿಧರ ಕುಲಕರ್ಣಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃತಿ ಬಿಡುಗಡೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ವಹಿಸಿಕೊಳ್ಳಲಿದ್ದಾರೆ.
ಪುಸ್ತಕವನ್ನು ಡಾ.ಲಕ್ಷ್ಮೀಕಾಂತ ವಿ.ಮೋಹರೀರ ಬಿಡುಗಡೆಗೊಳಿಸಲಿದ್ದಾರೆ. ಕೃತಿಯ ಪರಿಚಯವನ್ನು ಸಾಹಿತಿ ಪ್ರಸನ್ನ ಮಂಡಲಗಿರಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಯ್ಯಪ್ಪಯ್ಯ ಹುಡಾ, ವೀರ ಹನುಮಾನ, ಚಿದಾನಂದ ಸಾಲಿ, ಗಮಕಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ ಸೇರಿ ಅನೇಕರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಮೇಶ ಕುಲಕರ್ಣಿ, ವೆಂಕಟೇಶ ಕುಲಕರ್ಣಿ , ಕೃತಿಕಾರ ಪಿ.ವೆಂಕಟೇಶ ಬಾಗಲವಾಡ, ಗುರುರಾಜ ಜೆ.ಎಂ., ವೀರೇಶ ಇದ್ದರು.