ಲಿಂಗಸುಗೂರು ಸಮೀಪದ ಗೆಜ್ಜಲಗಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆ ಕಾರ್ಯಕ್ರಮವನ್ನು ಶಾಸಕ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಉದ್ಘಾಟಿಸಿದರು. ಶಾಸಕ ಮಾನಪ್ಪ ವಜ್ಜಲ್, ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ, ಲಿಂಗಸುಗೂರು ವಿಜಯ ಮಹಾಂತೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಂಭವಿ ಮಠದ ಸೋಮೇಶ್ವರ ಸ್ವಾಮೀಜಿ, ಮಾಜಿ ಸಂಸದ ಬಿ.ವಿ.ನಾಯಕ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಗುರುಗುಂಟ ಸಂಸ್ಥಾನದ ರಾಜಾ ಸೋಮನಾಥ ನಾಯಕ ಇತರರಿದ್ದರು. 
ರಾಯಚೂರು

ಯೋಗಿ ಅದಿತ್ಯನಾಥ ಮುಂದಿನ ಪ್ರಧಾನಿ

ಪ್ರಮುಖ ಮುಖ್ಯಾಂಶಗಳು

  • ಧರ್ಮಸಭೆ

ಯೋಗಿ ಅದಿತ್ಯನಾಥ ಮುಂದಿನ ಪ್ರಧಾನಿ

ಲಿಂಗಸುಗೂರು: ದೇಶದಲ್ಲಿ ನರೇಂದ್ರ ಮೋದಿ ನಂತರ ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯನಾಥ ಪ್ರಧಾನಿಯಾಗುವುದು ನಿಶ್ಚಿತ ಎಂದು ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಸಮೀಪದ ಗೆಜ್ಜಲಗಟ್ಟ ಗ್ರಾಮದ ಶ್ರೀ ವೀರನಾಗಮ್ಮ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿಯಾಗಲು ಯಾರು ಎಷ್ಟೇ ಪ್ರಯತ್ನಿಸಿದರು ಯೋಗಿ ಅದಿತ್ಯನಾಥ ಆ ಸ್ಥಾನಕ್ಕೆ ಯೋಗ್ಯ ವ್ಯಕ್ತಿ. ದೇಶದಲ್ಲಿ ಸನಾತನ ಧರ್ಮ, ಸಂಸ್ಕೃತಿ ಉಳಿಯಬೇಕಾದರೆ ಯೋಗಿಯಂಥ ವ್ಯಕ್ತಿ ದೇಶಕ್ಕೆ ಬೇಕಾಗಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಲ್ಲು ತೂರುವುದು, ವಿನಾಕಾರಣ ಗಲಭೆ ನಡೆಸುವವರಿಗೆ ಜೆಸಿಬಿ ಯಂತ್ರದ ಮೂಲಕ ಪಾಠ ಕಲಿಸುವ ಉತ್ತರ ಪ್ರದೇಶದ ಸರ್ಕಾರದಂತೆ ಕರ್ನಾಟಕದಲ್ಲೂ ಅಂಥ ಆಡಳಿತ ಬೇಕಾಗಿದೆ. ಬಾಂಗ್ಲಾ ದೇಶದಿಂದ ಬಂದು ನಮ್ಮ ದೇಶದವರಿಗೆ ಗುರ್ ಎನ್ನುತ್ತಿದ್ದಾರೆ.
ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಹಿಂದೂಗಳು ಒಗ್ಗಟ್ಟಾಗಿರಬೇಕು. ಜಾತ್ಯಾತೀತರು ಎಂದು ಹೇಳುವ ನಮ್ಮಲ್ಲೇ ಪ್ರವೃತ್ತಿ ಕಡಿಮೆಯಾಗುತ್ತಿದೆ. ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವೇದವ್ಯಾಸರು, ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಳ್ಳೆಯ ವ್ಯಕ್ತಿತ್ವದಿಂದ ದೊಡ್ಡವರಾಗಿದ್ದಾರೆ.
ಕನಕದಾಸರಿಗೆ ಶ್ರೀ ಕೃಷ್ಣ ಪ್ರತ್ಯಕ್ಷವಾಗಿ ಕಿಂಡಿಯ ಮೂಲಕ ದರ್ಶನ ನೀಡಿದಂತೆ ಸನಾತನ ಧರ್ಮದಲ್ಲಿ ಭಕ್ತಿ, ಕಾಯಕಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಶಾಸಕ ಮಾನಪ್ಪ ವಜ್ಜಲ್ ಅವರು ಭಕ್ತಿ ಹೊಂದಿದ್ದರಿಂದ ಕುಲದೇವತೆ ಶ್ರೀ ವೀರನಾಗಮ್ಮನ ದೇವಾಲಯ ಕಟ್ಟಿಸಿ ಮಾದರಿಯಾಗಿದ್ದಾರೆ ಎಂದರು.
ಶಾಸಕ ಮಾನಪ್ಪ ವಜ್ಜಲ್, ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ, ಲಿಂಗಸುಗೂರು ವಿಜಯ ಮಹಾಂತೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಂಭವಿ ಮಠದ ಸೋಮೇಶ್ವರ ಸ್ವಾಮೀಜಿ, ಮಾಜಿ ಸಂಸದ ಬಿ.ವಿನಾಯಕ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಗುರುಗುಂಟ ಸಂಸ್ಥಾನದ ರಾಜಾ ಸೋಮನಾಥ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಪ್ರಮುಖರಾದ ಈಶ್ವರ ವಜ್ಜಲ್, ಕೆ.ಕರಿಯಪ್ಪ, ವೀರನಗೌಡ ಪಾಟೀಲ್ ಲೆಕ್ಕಿಹಾಳ ಇತರರಿದ್ದರು.