ಲಿಂಗಸುಗೂರು: ಪಟ್ಟಣ ಹಾಗೂ ಕರಡಕಲ್ಲ ಗ್ರಾಮದ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸುವ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ.
‘ಆಮೆಗತಿಯಲ್ಲಿ ಅಮೃತ ಯೋಜನೆ’ ಶೀರ್ಷಿಕೆಯಡಿ ಆ.14 ರಂದು ‘ವಿಜಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿಗಳ ಸೂಚನೆ ಮೇರೆಗೆ ಗುತ್ತಿಗೆದಾರರು ಕಾಮಗಾರಿ ಮತ್ತೆ ಆರಂಭಿಸಿದ್ದಾರೆ. ಕಾಳಾಪೂರ ಹತ್ತಿರದ ಕುಡಿಯುವ ನೀರಿನ ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ಎಂಎಸ್ ಏರು ಕೊಳವೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ.