ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ರಾಯಚೂರಿನ ಜಿಲ್ಲಾ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಮಹಿಳಾ ನೌಕರರ ಕ್ರೀಡಾಕೂಟದಲ್ಲಿ ಎಡಿಸಿ ಶಿವಾನಂದ ಭಜಂತ್ರಿ ಮಾತನಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ಪ್ರಮುಖರಾದ ಛಾಯದೇವಿ,ಜಯಶ್ರೀ, ವಿಜಯಲಕ್ಷ್ಮೀ, ಧನಲಕ್ಷ್ಮೀ, ಮಹಿನುಲ್ ಹಕ್, ಮಲ್ಲೇಶ್ ನಾಯಕ್ , ರಾಜಶೇಖರ್ ದಿನ್ನಿ, ರಾಜಶೇಖರ್ ನಾಯಕ್, ಯಂಕಪ್ಪ ಪಿರಂಗಿ, ಪರುಶುರಾಮ್ ಹುಜರಾತಿ ಇದ್ದರು.
ರಾಯಚೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಮಹಿಳಾ ನೌಕರರ ಕ್ರೀಡಾಕೂಟವನ್ನು ನಗರದ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆದವು.
ಕ್ರೀಡಾಕೂಟವನ್ನು ಎಡಿಸಿ ಶಿವಾನಂದ ಭಜಂತ್ರಿ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಮಹಿಳಾ ನೌಕರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಖುಷಿಯ ವಿಚಾರ. ಇಲ್ಲಿ ಸೋಲು, ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ. ಪ್ರತಿಯೊಬ್ಬರು ಕ್ರೀಡಾಸ್ಪೂರ್ತಿಯನ್ನು ಹೊಂದಿರಬೇಕು ಹಾಗೂ ಆರೋಗ್ಯವಾಗಿರಲು ನೌಕರರು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ ಮಾತನಾಡಿ, ನೌಕರರು ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಕ್ರೀಡಾಕೂಡದಲ್ಲಿ ಭಾಗವಹಿಸಿದಾಗ ಮಾನಸಿಕವಾಗಿ, ದೈಹಿಕವಾಗಿ ಸಬಲರಾಗಲು ಸಹಾಯಕವಾಗುತದೆ. ಅತಿ ಹೆಚ್ಚು ಮಹಿಳಾ ನೌಕರರು ಭಾಗವಹಿಸಿದ್ದಕ್ಕಾಗಿ ಮಹಿಳೆಯರಿಗೆ ಖುಷಿಯಾಗಿದೆ ಎಂದರು.
ನಂತರ ಮಹಿಳೆಯರಿಗಾಗಿ ನಿಂಬೆಕಾಯಿ-ಚಮಚ ಓಟದ ಸ್ಫರ್ಧೆ, ಖಾಲಿ ಬಾಟಲಿಗೆ ನೀರು ತುಂಬಿಸುವ ಆಟ ,ಹಗ್ಗ ಜಗ್ಗಾಟ, ರಂಗೋಲಿ ಸ್ಪರ್ಧೆ ,ಶಟಲ್ ಬಾಲ್,ಬಲೂನ್ ಊದುವ ಸ್ಪರ್ಧೆ,ಚದುರಂಗ ,ಜಾನಪದ ಹಾಡು ಮತ್ತು ಭಾವಗೀತೆ ಸ್ಪರ್ಧೆಗಳು ನಡೆದವು ಒಟ್ಟು 300 ಜನ ಮಹಿಳಾ ನೌಕರರು ಭಾಗವಹಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಛಾಯದೇವಿ,ಜಯಶ್ರೀ, ವಿಜಯಲಕ್ಷ್ಮೀ, ಧನಲಕ್ಷ್ಮೀ, ಮಹಿನುಲ್ ಹಕ್, ಮಲ್ಲೇಶ್ ನಾಯಕ್ , ರಾಜಶೇಖರ್ ದಿನ್ನಿ, ರಾಜಶೇಖರ್ ನಾಯಕ್, ಯಂಕಪ್ಪ ಪಿರಂಗಿ, ಪರುಶುರಾಮ್ ಹುಜರಾತಿ, ರತ್ನಾ , ಭೀಮೇಶ್ ನಾಯಕ ಸೇರಿ ಅನೇಕರು ಇದ್ದರು.